ಆದರೆ, ಈ ಮೈತ್ರಿಕೂಟದ ಮರುಸ್ಥಾಪನೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕಠಿಣ ಷರತ್ತೊಂದನ್ನು ವಿಧಿಸಿದ್ದರು. ತಮಿಳುನಾಡು ಬಿಜೆಪಿಯಲ್ಲಿ ತಕ್ಷಣವೇ ನಾಯಕತ್ವ ಬದಲಾವಣೆಯಾಗಬೇಕು ಹಾಗೂ ಅಣ್ಣಾಮಲೈ ಅವರನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಬೇಕು ಎಂದು ಅವರು ಹಠ ಹಿಡಿದಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಹೈಕಮಾಂಡ್ ಅಣ್ಣಾಮಲೈ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಿತು. ತಮಗೆ ಎದುರಾದ ಈ ವ್ಯವಸ್ಥಿತ ಕಡೆಗಣನೆಯಿಂದ ತೀವ್ರ ಬೇಸತ್ತಿದ್ದ ಅವರು, ಇತ್ತೀಚಿನ ವಿಧಾನಸಭಾ ಚುನಾವಣಾ ಕಣದಿಂದ ಸಂಪೂರ್ಣ ದೂರ ಉಳಿದರಲ್ಲದೆ, ಪಕ್ಷದ ಪರವಾಗಿ ಯಾವುದೇ ಪ್ರಮುಖ ಪ್ರಚಾರದಲ್ಲೂ ಭಾಗವಹಿಸಲಿಲ್ಲ. ಈ ಎಲ್ಲಾ ಸರಣಿ ಬೆಳವಣಿಗೆಗಳೇ ಈಗ ಅವರು ಕಮಲ ಪಾಳೆಯಕ್ಕೆ ಗುಡ್ಬೈ ಹೇಳಲು ಮುಖ್ಯ ಕಾರಣ ಎನ್ನಲಾಗುತ್ತಿದೆ(ಏಜೆನ್ಸೀಸ್).