ಸುಪ್ರೀಂ ಪ್ರಕಾರ, ನಗರ ನಗರಾಭಿವೃದ್ಧಿ ಪ್ರಾಧಿಕಾರಗಳು (ಬಿಡಿಎ, ಮುಂತಾದವು), ಮಹಾನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದು ಹಾಗೂ ಅವುಗಳನ್ನು ಸಂರಕ್ಷಿಸುವುದು ಕಾನೂನಾತ್ಮಕ ಕರ್ತವ್ಯವಾಗಿದೆ. ಒಂದು ವೇಳೆ ಫುಟ್‌ಪಾತ್ ಇಲ್ಲದೆ ಅಥವಾ ಅವುಗಳ ನಿರ್ವಹಣೆ ಸರಿ ಇಲ್ಲದೆ ಪಾದಚಾರಿಗಳ ಹಕ್ಕಿಗೆ ಧಕ್ಕೆಯಾದರೆ, ನಾಗರಿಕರು ಇನ್ನು ಮುಂದೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ಸಾಂವಿಧಾನಿಕ ಪರಿಹಾರ ಮತ್ತು ನಷ್ಟ ಪರಿಹಾರ ಕೋರಿ ದಾವೆ ಹೂಡಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.