Unknown Facts: ಇತ್ತೀಚಿನ ದಿನಗಳಲ್ಲಿ, ಸಣ್ಣಪುಟ್ಟ ವಿಷಯಗಳಿಗೂ ಜನರು ಜಗಳವಾಡುವುದು ಮತ್ತು ಪೊಲೀಸ್ ಠಾಣೆಗಳ ಮೆಟ್ಟಿಲೇರುವುದು ತುಂಬಾ ಸಾಮಾನ್ಯವಾಗಿದೆ. ಆದರೆ, ಈ ಒಂದು ಗ್ರಾಮದಲ್ಲಿ ಇಲ್ಲಿಯವರೆಗೂ ಯಾವುದೇ ಅಪರಾಧವೇ ನಡೆದಿಲ್ಲವಂತೆ. ಕಳೆದ 118 ವರ್ಷಗಳಿಂದ ಒಂದೇ ಒಂದು ಪೊಲೀಸ್ ವಾಹನವು ಕೂಡ ಈ ಗ್ರಾಮವನ್ನು ಪ್ರವೇಶಿಸಿಲ್ಲ ಎಂದರೆ ನೀವು ನಂಬುತ್ತೀರಾ? ಹೌದು, ಬಿಹಾರದ ಈ ಒಂದು ಹಳ್ಳಿಯು ಯಾವುದೇ ಘರ್ಷಣೆಗಳಿಲ್ಲದೆ ಶಾಂತಿಯುತವಾಗಿ ಬದುಕುತ್ತಿದೆ ಮತ್ತು ದೇಶಕ್ಕೆ ಮಾದರಿಯಾಗಿ ನಿಂತಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಆ ಗ್ರಾಮದ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.