ವಿಜಯವಾಡ: ಓಬುಲೇಸು, ಮಹೇಶ್ ರೆಡ್ಡಿ, ಮನೋಹರ್ ರೆಡ್ಡಿ, ಭಾಸ್ಕರ್ ರೆಡ್ಡಿ, ಚಕ್ಕರೆಡ್ಡಿ...ಹೀಗೆ ನಾನಾ ಹೆಸರಿನಲ್ಲಿರುವುದು ( So many Names ) ಒಬ್ಬನೇ ವ್ಯಕ್ತಿ. ಹೋದಲ್ಲೆಲ್ಲಾ ಹೊಸ ಹೆಸರು ಅಳವಡಿಸಿಕೊಳ್ಳುವುದು ಆತನಗಿರುವ ಅಭ್ಯಾಸ. ತನ್ನನ್ನು ನಂಬಿದವರನ್ನು ವಂಚಿಸುವುದೇ ಆತನ ಹವ್ಯಾಸ. ಹೋದಲ್ಲೆಲ್ಲಾ ಕೋಟ್ಯಂತರ ರೂಪಾಯಿ ಪಂಗನಾಮ ಹಾಕುವುದೇ ಆತನ ವೃತ್ತಿ. ಹಲವು ಪ್ರದೇಶಗಳಲ್ಲಿ ವಂಚನೆ ಮಾಡಿರುವ ಈ ಮಹಾನ್ ವಂಚಕ ಈಗಾಗಲೇ ಹಲವಾರು ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಜೈಲಿಗೆ ಹೋಗಿದ್ದಾನೆ. ಆದರೂ, ಈತನಿಗೆ ಬುದ್ಧಿ ಮಾತ್ರ ಇನ್ನೂ ಬಂದಿಲ್ಲ. ತನ್ನ ಇತ್ತೀಚಿನ ವಂಚನೆಗಳಿಂದ ಮತ್ತೊಮ್ಮೆ ರಾಯದುರ್ಗಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಜೈಲು ಪಾಲಾಗಿದ್ದಾನೆ.