48 ಗಂಟೆಯೊಳಗೆ ಹಾರ್ಮುಜ್ ಜಲಸಂಧಿ ತೆರೆಯುವಂತೆ ಇರಾನ್​ಗೆ ಟ್ರಂಪ್ ವಾರ್ನ್​; ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಬೆದರಿಕೆ | Donald Trump

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್: 48 ಗಂಟೆಯೊಳಗೆ ಒಳಗೆ ಇರಾನ್​ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯದಿದ್ದರೆ, ಅದರ ವಿದ್ಯುತ್ ಸ್ಥಾವರಗಳನ್ನು ಹೊಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ(ಮಾ. 22) ನೇರವಾಗಿಯೇ ಬೆದರಿಕೆ ಹಾಕಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು,  ಮಾತನಾಡಿರುವ ಅವರು, ಇರಾನ್‌ಗೆ ಪ್ರಮುಖ ಜಲಮಾರ್ಗವನ್ನು ತೆರೆಯಲು ನಿಖರವಾಗಿ 48 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಸಂಪೂರ್ಣವಾಗಿ ತೆರೆಯದಿದ್ದರೆ, ಹೊಸ ಸುತ್ತಿನ ದಾಳಿಯನ್ನು ಎದುರಿಸಬೇಕಾಗುತ್ತದೆ. ಅಮೆರಿಕಾ ಇರಾನಿನ ವಿವಿಧ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಬೆದರಿಕೆಗ ಇರಾನ್ ತಿರುಗೇಟು

ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗೆ ಪ್ರತಿಕ್ರಿಯಿಸಿರುವ ಇರಾನ್,  ಅಂತಹ ಯಾವುದೇ ಕ್ರಮವು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೂಲಸೌಕರ್ಯಗಳ ವಿರುದ್ಧ ಪ್ರತೀಕಾರವನ್ನು ಪ್ರಚೋದಿಸುತ್ತದೆ ಎಂದು ತಿರುಗೇಟು ನೀಡಿದೆ. 
ಈ ಕುರಿತು ಮಾತನಾಡಿರುವ ಇರಾನ್ ಸಂಸತ್​​ನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್, ಇರಾನ್‌ನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡರೆ, ಯುಎಸ್ ನೆಲೆಗಳನ್ನು ಹೊಂದಿರುವ ದೇಶಗಳಲ್ಲಿನ ಇಂಧನ ತಾಣಗಳು, ತಂತ್ರಜ್ಞಾನ ಹಾಗೂ ನೀರಿನ ಮೂಲಸೌಕರ್ಯ ನಮ್ಮ ಗುರಿಯಾಗುತ್ತವೆ. ಮತ್ತು ಹಾರ್ಮುಜ್ ಜಲಸಂಧಿ ಸಂಪೂರ್ಣ ಮುಚ್ಚಬಹುದು ಎಂದು ಎಚ್ಚರಿಸಿದ್ದಾರೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ದೊಡ್ಡ ಮಾರ್ಗವಾಗಿದೆ. ಫೆಬ್ರವರಿ 28ರಂದು ಇರಾನ್ ಇದನ್ನು ಮುಚ್ಚಿದೆ. ಇದರಿಂದ ಜಾಗತಿಕವಾಗಿ ಹಲವು ದೇಶಗಳಲ್ಲಿ ಇಂಧನ ಬೆಲೆಗಳು ಹಚ್ಚಿಸಿದ್ದು, ಜಾಗತಿಕ ಮಾರುಕಟ್ಟೆಯನ್ನು ಅಲುಗಾಡಿಸಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net