ಒಂದೇ ಹುಡುಗನಿಗಾಗಿ ಇಬ್ಬರು ಹುಡುಗಿಯರ ಕಿತ್ತಾಟ: ಹಾಡ ಹಗಲಲ್ಲೇ ಹರಿಯಿತು 19ರ ಯುವತಿಯ ನೆತ್ತರು! Triangle Love

ಹಾಡ ಹಗಲಲ್ಲೇ ಹರಿಯಿತು 19ರ ಯುವತಿಯ ನೆತ್ತರು ( Triangle Love )
ಹಾಡ ಹಗಲಲ್ಲೇ ಹರಿಯಿತು 19ರ ಯುವತಿಯ ನೆತ್ತರು ( Triangle Love )
Published on

ಪ್ರಮುಖ ಮುಖ್ಯಾಂಶಗಳು

  • ಪ್ರೇಮಿಗಳ ದಿನಕ್ಕೂ ಮುನ್ನವೇ ಮುಂಬೈನಲ್ಲಿ ನಡೆದ ಭಯಾನಕ ಘಟನೆ
  • ಓರ್ವ ಯುವತಿಯ ಕೊಲೆಯಲ್ಲಿ ಅಂತ್ಯವಾದ ತ್ರಿಕೋನ ಪ್ರೇಮಕಥೆ
  • ಘಟನೆ ನಡೆದ 12 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಿದ ಮುಂಬೈ ಪೊಲೀಸರು
Triangle Love : ನಾಳೆ(ಫೆ.14) ಪ್ರೇಮಿಗಳ ದಿನ ಅನ್ನೋದು ಎಲ್ಲರಿಗೂ ಗೊತ್ತಿದೆ. ಪ್ರೀತಿಯ ಸಂಕೇತವಾಗಿ ಪ್ರೇಮಿಗಳು ಶುಭಾಶಯ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲು ಈಗಾಗಲೇ ಆರಂಭಿಸಿದ್ದಾರೆ. ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಲು ತಮ್ಮ ಪ್ರೇಯಸಿ ಮತ್ತು ಪ್ರಿಯಕರ ಜತೆ ಅತ್ಯುತ್ತಮ ಕ್ಷಣಗಳನ್ನು ಕಳೆಯಲು ಪ್ಲಾನ್​ ಮಾಡಿದ್ದಾರೆ. ಇಂತಹ ಶುಭ ಸಮಯದಲ್ಲೇ ಒಂದು ಭಯಾನಕ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ಸಂಭವಿಸಿದೆ. ತ್ರಿಕೋನ ಪ್ರೇಮ ಕತೆಯೊಂದು ಯುವತಿಯೊಬ್ಬಳ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ಯುವತಿಯನ್ನು ಶಿಫಾ ಶೇಖ್ (19) ಎಂದು ಗುರುತಿಸಲಾಗಿದೆ. ಈಕೆಯನ್ನು ಶಿವಾಜಿ ನಗರ ಏರಿಯಾದ ಫುರ್ಖಾನಿಯಾ ಮಸೀದಿ ಬಳಿ ತಲೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದ ಕೇವಲ 12 ಗಂಟೆಯ ಒಳಗೆ ಮುಂಬೈ ಪೊಲೀಸರು, 25 ವರ್ಷದ ಯುವತಿ ಮತ್ತು 23 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಅಂದಹಾಗೆ, ಪ್ರಾಥಮಿಕ ತನಿಖೆಯ ಪ್ರಕಾರ, ಶಿಫಾಗೂ ಮತ್ತು 25 ವರ್ಷದ ಮಹಿಳೆಗೂ 23 ವರ್ಷದ ಯುವಕನ ಮೇಲೆ ಲವ್​ ಇತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಅಂದಹಾಗೆ, ಈ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಪೊಲೀಸರ ಪ್ರಕಾರ, ಶಿವಾಜಿ ನಗರ ಏರಿಯಾದ ಮತ್ತೊಬ್ಬ ಮಹಿಳೆಯನ್ನು ಭೇಟಿಯಾಗಲು ಆಕೆಯ ಕರೆ ಬಂದ ನಂತರ ಶಿಫಾ ತನ್ನ ಮನೆಯಿಂದ ಹೊರಟಳು. ಫುರ್ಖಾನಿಯಾ ಮಸೀದಿ ತಲುಪುತ್ತಿದ್ದಂತೆ ಆ ಸ್ಥಳದಲ್ಲಿ ಒಂದು ಮೀಟಿಂಗ್​ ನಡೆಯಿತು. ಶಿಫಾ ಮತ್ತು ಶಂಕಿತನ ನಡುವೆ ಯಾವುದೋ ಒಂದು ವಿಷಯದ ಬಗ್ಗೆ ತೀವ್ರ ವಾಗ್ವಾದ ನಡೆಯಿತು.
ಇದೇ ವೇಳೆ ಶಿಫಾ ಅವರ ಮುಖಕ್ಕೆ 25 ವರ್ಷದ ಮಹಿಳೆ ನೇರವಾಗಿ ಗುಂಡಿಕ್ಕಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡು ಆಕೆಯ ಕೆನ್ನೆಯ ಮೂಲಕ ಹೋಗಿ ತಲೆಬುರುಡೆಗೆ ತಗುಲಿ ಮಾರಕ ಗಾಯಗಳಾದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಫಾಳನ್ನು ನೋಡಿ ಸ್ಥಳೀಯರು ಕೂಡಲೇ ಆಕೆಯನ್ನು ಘಾಟ್ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.
ಆಕೆಗೆ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಲಾಗಿದೆ. ಪರಿಣಾಮ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದರು. ಇದೇ ಸಮಯದಲ್ಲಿ ಪೊಲೀಸ್ ತಂಡ ಆಸ್ಪತ್ರೆಗೆ ಆಗಮಿಸಿತ್ತು, ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರಂಭಿಕ ವಿಚಾರಣೆಯ ಸಮಯದಲ್ಲಿ ಸಂಗ್ರಹಿಸಿದ ದೃಶ್ಯಾವಳಿಗಳು ಮತ್ತು ಮಾಹಿತಿಗಳ ಆಧಾರದ ಮೇಲೆ, ಪೊಲೀಸರು, ಅಪರಾಧ ನಡೆದ 12 ಗಂಟೆಗಳ ಒಳಗೆ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net