ಕುಟುಂಬಕ್ಕೆ ಹೇಳದೇ ಲಿಪ್​ಲಾಕ್​ ದೃಶ್ಯದಲ್ಲಿ ನಟನೆ: ಟ್ರೈಲರ್​ ಬಿಡುಗಡೆ ಬಳಿಕ ನಟಿಗೆ ಕಾದಿತ್ತು ಶಾಕ್​! Manasa Varanasi

ಕಪಲ್​ ಫ್ರೆಂಡ್ಲಿ ಸಿನಿಮಾದಲ್ಲಿ ನಟಿ ಮಾನಸ ವಾರಣಾಸಿ ( Manasa Varanasi ) ಲಿಪ್​ಲಾಕ್​
ಕಪಲ್​ ಫ್ರೆಂಡ್ಲಿ ಸಿನಿಮಾದಲ್ಲಿ ನಟಿ ಮಾನಸ ವಾರಣಾಸಿ ( Manasa Varanasi ) ಲಿಪ್​ಲಾಕ್​
Published on

ಪ್ರಮುಖ ಮುಖ್ಯಾಂಶಗಳು

  • ತೆಲುಗಿನ ಕಪಲ್ ಫ್ರೆಂಡ್ಲಿ ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ
  • ನಟ ಸಂತೋಷ್ ಶೋಭನ್ ಜೊತೆಗೆ ಮಾನಸ ವಾರಣಾಸಿ ನಟಿಸಿರುವ ಸಿನಿಮಾ
  • ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್​ನಲ್ಲಿವೆ ಸಂತೋಷ್​-ಮಾನಸ ನಡುವಿನ ಲಿಪ್​ಲಾಕ್​ ದೃಶ್ಯ
Manasa Varanasi : ಮಿಸ್ ಇಂಡಿಯಾ ಮಾನಸ ವಾರಣಾಸಿ ಅವರು ನಾಯಕಿಯಾಗಿ ಬದಲಾಗಿದ್ದು, ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟ ಸಂತೋಷ್ ಶೋಭನ್ ಜೊತೆಗೆ ಮಾನಸ ವಾರಣಾಸಿ ನಟಿಸಿರುವ 'ಕಪಲ್ ಫ್ರೆಂಡ್ಲಿ' ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾನಸ ವಾರಣಾಸಿ ಅವರು ನೀಡಿದ ಅಚ್ಚರಿಯ ಹೇಳಿಕೆ ಇದೀಗ ವೈರಲ್​ ಆಗಿದೆ. 
ಕಪಲ್​ ಫ್ರೆಂಡ್ಲಿ ಸಿನಿಮಾದಲ್ಲಿ ಮಾನಸ ವಾರಣಾಸಿ ಮತ್ತು ಸಂತೋಷ್ ಶೋಭನ್ ನಡುವೆ ಲಿಪ್​ಲಾಕ್​ ಮತ್ತು ಪ್ರಣಯ ದೃಶ್ಯಗಳಿವೆ. ಈ ದೃಶ್ಯಗಳನ್ನು ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಈ ಟ್ರೈಲರ್​ ನೋಡಿ ನಿಮ್ಮ ಕುಟುಂಬ ಯಾವ ರೀತಿ ಪ್ರತಿಕ್ರಿಯೆ ನೀಡಿತು ಎಂಬ ಪ್ರಶ್ನೆಗೆ ಮಾನಸ ಅವರು ನೀಡಿದ ಉತ್ತರ ಎಲ್ಲರ ಹುಬ್ಬೇರಿಸಿದೆ. 

ನನ್ನ ಮಿತಿಯೊಳಗೆ ನಟಿಸಿದ್ದೇನೆ

ಈ ಸಿನಿಮಾದ ಕಥೆ ಹೇಳುವಾಗ, ಎರಡು ಕಿಸ್ಸಿಂಗ್​ ಸೀನ್‌ಗಳು ಇರುತ್ತವೆ ಎಂದು ಹೇಳಿದ್ದರು. ಇದು ಪ್ರೇಮಕಥೆಯಾಗಿರುವುದರಿಂದ ಕಿಸ್ಸಿಂಗ್​ ಸೀನ್​ ಸೂಕ್ತ ಎಂದು ನನಗೆ ಅರ್ಥವಾಯಿತು. ಎರಡು ತಿಂಗಳು ಇಡೀ ತಂಡದೊಂದಿಗೆ ಪ್ರಯಾಣಿಸಿದ ನಂತರ, ನಾನು ಆರಾಮವಾಗಿದ್ದೆ ಮತ್ತು ಆ ಸೀನ್‌ಗಳನ್ನು ಯಾವುದೇ ಮುಜುಗರವಿಲ್ಲದೇ ಮಾಡಿದೆ. ಅಂತಹ ಸೀನ್‌ಗಳಲ್ಲಿ ನನಗೂ ಕೆಲವು ಮಿತಿಗಳಿವೆ. ಆ ಮಿತಿಗಳೊಳಗೆ ನಾನು ಅದನ್ನು ಮಾಡುತ್ತೇನೆ ಎಂದು ಮಾನಸ ಹೇಳಿದರು.

ನನ್ನ ಮೇಲೆ ಕೋಪಗೊಂಡರು

ಮಾತು ಮುಂದುವರಿಸಿದ ಮಾನಸ, ಕಿಸ್ಸಿಂಗ್​ ಸೀನ್​ಗಳ ಬಗ್ಗೆ ನಾನು ನನ್ನ ಕುಟುಂಬಕ್ಕೆ ಹೇಳಿರಲಿಲ್ಲ. ಟ್ರೈಲರ್ ನೋಡಿದ ನಂತರ, ನಮ್ಮ ಕುಟುಂಬಕ್ಕೆ ತಿಳಿಯಿತು. ಈ ವೇಳೆ ನನ್ನ ಮೇಲೆ ಕೋಪಗೊಂಡರು. ಇದು ವಾರಣಾಸಿ ಕುಟುಂಬಕ್ಕೆ ಗೌರವದ ವಿಷಯ ಎಂದು ಗದರಿದರು. ಕಿಸ್ಸಿಂಗ್​ ಸೀನ್​ ನೋಡಿ ನಮ್ಮ ಕುಟುಂಬದವರಿಗೆ ಸ್ವಲ್ಪ ನೋವಾಯಿತು ಎಂದರು.

ಮನವರಿಕೆ ಮಾಡಿದೆ

ವಾಸ್ತವವಾಗಿ, ನಮ್ಮ ಕುಟುಂಬದಲ್ಲಿ ಸಿನಿಮಾಗಳನ್ನೇ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಈ ರೀತಿಯ ಚುಂಬನದ ದೃಶ್ಯವನ್ನಂತೂ ಒಪ್ಪುವ ಮಾತೇ ಇಲ್ಲ. ಹೀಗಾಗಿ, ನನ್ನ ಲಿಪ್​ಲಾಕ್​ ದೃಶ್ಯದಿಂದಾಗಿ ಕೋಪಗೊಂಡರು ಮತ್ತು ಅದರಿಂದ ಹೊರಬರಲು ಬಹಳ ಸಮಯ ತೆಗೆದುಕೊಂಡರು. ಕೆಲವು ಸಂಬಂಧಿಕರು ಬೇಕು ಅಂತಾನೇ ಕಾಮೆಂಟ್‌ಗಳನ್ನು ಮಾಡುತ್ತಾರೆ ಮತ್ತು ನೀವ್ಯಾರು ಆ ಕಾಮೆಂಟ್​ಗಳನ್ನು ಗಮನಿಸಬಾರದು ಅಂತಾ ಕುಟುಂಬಕ್ಕೆ ನಾನು ಮನವರಿಕೆ ಮಾಡಿಕೊಟ್ಟೆ ಎಂದು ನಟಿ ಮಾನಸ ಹೇಳಿದ್ದಾರೆ. 
ಅಂದಹಾಗೆ, ಕತೆಗೆ ತಕ್ಕಂತೆ ಭವಿಷ್ಯದ ಚಿತ್ರಗಳಲ್ಲಿಯೂ ತಾನು ಲಿಪ್​ಲಾಕ್​ ಮತ್ತು ಬೋಲ್ಡ್​ ದೃಶ್ಯಗಳಲ್ಲಿ ನಟನೆ ಮಾಡುವುದಾಗಿ ಮಾನಸ ವಾರಣಾಸಿ ಅವರು ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net