ಕುರಿಂಜಲ್ (ಕರಿಕ್ಕಲ್ ಬೆಟ್ಟ) ಚಾರಣ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಡಾಲು ಸಮೀಪದ ಪರ್ವತ. ಕಾಫಿನಾಡಿನ ಇತರೆ ಚಾರಣಗಳ ಪೈಕಿ ಪ್ರವಾಸಿಗರಿಗೆ ಹೆಚ್ಚು ಪರಿಚಿತವಲ್ಲದ ಶಿಖರವಿದು ಅನ್ನೋದೇ ಅಚ್ಚರಿ ಸಂಗತಿ! ಸಮುದ್ರ ಮಟ್ಟದಿಂದ 5,751 ಅಡಿ ಎತ್ತರದಲ್ಲಿರುವ ಈ ಪರ್ವತದ ಬಗ್ಗೆ ಬಹುತೇಕರಿಗೆ ಇಂದಿಗೂ ತಿಳಿದಿಲ್ಲ. ಪ್ರವಾಸಿಗರು ಮುಳ್ಳಯ್ಯನಗಿರಿ, ಕುದುರೆಮುಖ, ಕೆಮ್ಮಣಗುಂಡಿ, ಬಾಬುಬುಡನ್ಗಿರಿ, ಘಾಟಿಕಲ್ಲು, ನೇತ್ರಾವತಿ, ಎತ್ತಿನಭುಜ ಚಾರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಅಷ್ಟಕ್ಕೂ, ಜನರಿಗೆ ಅಷ್ಟು ಪರಿಚಯವಿಲ್ಲದ ಕುರಿಂಜಲ್ ಶಿಖರಕ್ಕೆ ನಾವು ಹೋಗಬೇಕು, ಅಲ್ಲಿ ಕಂಡ ಕರಿಕ್ಕಲ್ ಬೆಟ್ಟದ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಬೇಕು ಅಂತ ಅನಿಸಿತು. ಕಡೆಗೂ ಮಾಡಿಬಿಟ್ಟೆವು ಕಣ್ರೀ ಈ ಟ್ರೆಕ್!