ಬರೈಕ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ಗೌರವಾನ್ವಿತ ಮಹೋದಯರೇ, ನಾನು ಈ ಮೂಲಕ ನನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಇದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಬೇಕಾಗಿ ವಿನಂತಿ. ನನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ತಮಗೆ, ಗೌರವಾನ್ವಿತ ಉಪಸಭಾಪತಿಗಳಿಗೆ ಮತ್ತು ರಾಜ್ಯಸಭಾ ಸಚಿವಾಲಯದ ಎಲ್ಲಾ ಅಧಿಕಾರಿಗಳಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಬರೆದಿದ್ದಾರೆ. ಪ್ರಕಾಶ್ ಬರೈಕ್ ರಾಜೀನಾಮೆಯೊಂದಿಗೆ, ಮೇಲ್ಮನೆಯಲ್ಲಿ ತೃಣಮೂಲ ಕಾಂಗ್ರೆಸ್ನ ಬಲವು 10ಕ್ಕೆ ಕುಸಿಯಲಿದೆ. ಟಿಎಂಸಿಯ ಸಂಕಷ್ಟ ಇಷ್ಟಕ್ಕೇ ಮುಗಿಯುವಂತೆ ಕಾಣುತ್ತಿಲ್ಲ. ಮೂಲಗಳ ಪ್ರಕಾರ, ಮುಂಬರುವ ವಾರದಲ್ಲಿ ಇನ್ನೂ ಮೂವರು ಟಿಎಂಸಿ ರಾಜ್ಯಸಭಾ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಮತ್ತಷ್ಟು ಬಿಕ್ಕಟ್ಟು ತಂದೊಡ್ಡಬಹುದು.