ಹೀಗೆ ಸೆರೆಸಿಕ್ಕ ಸಣ್ಣ ಜೀವಿಗಳು, ಆ ಸುಂಟರಗಾಳಿಯು ಚಲಿಸಿದಂತೆಲ್ಲಾ ಅದರ ಜೊತೆಯಲ್ಲೇ ಸಾಗುತ್ತವೆ. ಅಂತಿಮವಾಗಿ, ಗಾಳಿಯ ವೇಗವು ಕಡಿಮೆಯಾದಾಗ ಅಥವಾ ಸುಂಟರಗಾಳಿಯ ತೀವ್ರತೆ ಕುಗ್ಗಿದಾಗ, ಅದರೊಳಗಿದ್ದ ಜೀವಿಗಳೆಲ್ಲವೂ ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುತ್ತವೆ. ಇಂತಹ ಕೆಲವು ಜಲಸ್ತಂಭಗಳು ನೂರಾರು ಮೈಲುಗಳಷ್ಟು ದೂರ ಪ್ರಯಾಣಿಸಬಲ್ಲವಾದರೂ, ಸಾಮಾನ್ಯವಾಗಿ ಒಂದು ಅಥವಾ ಎರಡು ಮೈಲು ಸಾಗುವಷ್ಟರಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಂಡು ಕಣ್ಮರೆಯಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಹಗುರವಾದ ಉಭಯಚರಗಳು ಹಾಗೂ ಜಲಚರಗಳು ಗಾಳಿಯಲ್ಲಿ ತೇಲಿಹೋಗಿ ಇಂತಹ ವಿಚಿತ್ರ ಮಳೆಗೆ ಕಾರಣವಾಗುತ್ತವೆ, (ಏಜೆನ್ಸೀಸ್).