ಮತ್ತೊಂದೆಡೆ, ಟೆಸ್ಲಾ ಕಂಪನಿಯ 'ಆಟೋಪೈಲಟ್' ತಂತ್ರಜ್ಞಾನವು ಅತ್ಯಂತ ಜನಪ್ರಿಯ ಚಾಲನಾ ನೆರವು ವೈಶಿಷ್ಟ್ಯವಾಗಿದ್ದರೂ, ಕಳೆದ ಹಲವು ವರ್ಷಗಳಿಂದ ಇದು ಪದೇಪದೆ ತಾಂತ್ರಿಕ ದೋಷಗಳು ಮತ್ತು ಕಾರ್ಯಕ್ಷಮತೆಯ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಇಂತಹ ತಂತ್ರಜ್ಞಾನದ ಬಳಕೆಯಿಂದ ಎದುರಾಗುವ ಅಪಾಯಗಳನ್ನು ತಪ್ಪಿಸಲು, ವಾಹನ ಚಾಲನೆ ಮಾಡುವಾಗ ಯಾವಾಗಲೂ ಕೈಗಳನ್ನು ಸ್ಟೀರಿಂಗ್ ವೀಲ್ ಮೇಲೆಯೇ ಇರಿಸಿರಬೇಕು ಮತ್ತು ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣವೇ ವಾಹನದ ನಿಯಂತ್ರಣವನ್ನು ಕೈಗೆತ್ತಿಕೊಳ್ಳಲು ಸಿದ್ಧರಿರಬೇಕು ಎಂದು ಟೆಸ್ಲಾ ಕಂಪನಿಯ ಬಳಕೆದಾರರ ಕೈಪಿಡಿಗಳಲ್ಲಿ ಚಾಲಕರಿಗೆ ಸ್ಪಷ್ಟವಾಗಿ ಸೂಚಿಸಿರಲಾಗುತ್ತದೆ. ಸ್ವಲ್ಪ ಯಾಮಾರಿದರೂ ಇಂತಹ ಅನಾಹುತಗಳು ಸಂಭವಿಸುತ್ತವೆ ಅನ್ನೋದಕ್ಕೆ ಈ ಘಟನೆಯೇ ತಾಜಾ ಸಾಕ್ಷಿಯಾಗಿದೆ, (ಏಜೆನ್ಸೀಸ್).