ಬಸ್​ ಕಂಡಕ್ಟರ್​ ಜತೆ ಓಡಿಹೋದ ಹೆಂಡತಿ: ಇದೆಲ್ಲ ಖ್ಯಾತ ಯೂಟ್ಯೂಬರ್ ಅಖಿಲ್​ ಅನುಭವಿಸುತ್ತಿರುವ ಕರ್ಮದ ಫಲವಂತೆ!​ Akhil NRD

ಬಸ್​ ಕಂಡಕ್ಟರ್​ ಜತೆ ಓಡಿಹೋದ ಹೆಂಡತಿ: ಇದೆಲ್ಲ ಖ್ಯಾತ ಯೂಟ್ಯೂಬರ್ ಅಖಿಲ್​ ಅನುಭವಿಸುತ್ತಿರುವ ಕರ್ಮದ ಫಲವಂತೆ!​ Akhil NRD
ಬಸ್​ ಕಂಡಕ್ಟರ್​ ಜತೆ ಓಡಿಹೋದ ಹೆಂಡತಿ: ಇದೆಲ್ಲ ಖ್ಯಾತ ಯೂಟ್ಯೂಬರ್ ಅಖಿಲ್​ ಅನುಭವಿಸುತ್ತಿರುವ ಕರ್ಮದ ಫಲವಂತೆ!​ Akhil NRD
Published on

ಪ್ರಮುಖ ಮುಖ್ಯಾಂಶಗಳು

  • ಕೇರಳ ಖ್ಯಾತ ಯೂಟ್ಯೂಬರ್​ ಅಖಿಲ್​ ಎನ್​ಆರ್​ಡಿ ಪತ್ನಿ ಮೇಘಾ ಬಸ್​ ಕಂಡಕ್ಟರ್​ ಜತೆ ಪರಾರಿ
  • ರಾತ್ರೋರಾತ್ರಿ ಪ್ರಿಯಕರನ ಜೊತೆ ಕಾರಿನಲ್ಲಿ ಎಸ್ಕೇಪ್​ ಆದ ಮೇಘಾ ವಿಡಿಯೋ ವೈರಲ್​
  • ಒಸಿಡಿ ಸಮಸ್ಯೆಯನ್ನು ಗೇಲಿ ಮಾಡಿದ್ದರ ಕರ್ಮಫಲ ಎಂದು ಅಖಿಲ್​ ಕಾಲೆಳೆದ ಮಾಜಿ ಬಿಗ್​ಬಾಸ್​ ಸ್ಪರ್ಧಿ
  • ನನಗೆ ನೀಡಿದ ನೋವಿನ ಕರ್ಮದ ಫಲವೇ ಇಂದು ಅಖಿಲ್​ ಅನುಭವಿಸುತ್ತಿದ್ದಾರೆಂದ ಏಂಜಲಿನ್​ ಮರಿಯಾ
ತಿರುವನಂತಪುರಂ: ಕೇರಳದ ಮಾಜಿ ಬಿಗ್​ಬಾಸ್​ ಸ್ಪರ್ಧಿ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಏಂಜೆಲಿನ್ ಮರಿಯಾ ಅವರು ಖ್ಯಾತ ಯೂಟ್ಯೂಬರ್​ ಅಖಿಲ್ ಎನ್‌ಆರ್‌ಡಿ ( Akhil NRD ) ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಖಿಲ್​ ಅವರ ಪತ್ನಿ ಮೇಘಾ, ಬಸ್​ ಕಂಡಕ್ಟರ್​ ಒಬ್ಬರ ಜೊತೆಯಲ್ಲಿ ಓಡಿ ಹೋಗಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿರುವುದರ ನಡುವೆಯೇ ಮರಿಯಾ ಅವರು ಕರ್ಮಫಲದ ಮಾತುಗಳನ್ನಾಡಿ ಅಖಿಲ್​ ಕಾಲೆಳೆದಿದ್ದಾರೆ.
ನಾನು ಅಖಿಲ್ ಎನ್‌ಆರ್‌ಡಿ ಅವರ ಯೂಟ್ಯೂಬ್ ಚಾನಲ್‌ನ ಚಂದಾದಾರಳಾಗಿದ್ದೆ. ಒಮ್ಮೆ ಅಖಿಲ್​ ಅವರು ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD) ಹಾಗೂ ಮೈಸೊಫೋಬಿಯಾ (ಅಂದರೆ ಕೊಳೆ ಮತ್ತು ಕ್ರಿಮಿಕೀಟಗಳ ಬಗ್ಗೆ ವಿಪರೀತ ಭಯ) ಸಮಸ್ಯೆಯನ್ನು ವಿಡಿಯೋದಲ್ಲಿ ಗೇಲಿ ಮಾಡಿದ್ದರು. ಈ ಸಮಸ್ಯೆಗಳು ನನಗಿರುವ ಕಾರಣ ಅದನ್ನು ನೋಡಿ ನನಗೆ ಮಾನಸಿಕ ಹಿಂಸೆಯಾಗಿತ್ತು. ನಾನು 2019ರಿಂದಲೂ ಈ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಆ ವಿಡಿಯೋ ನೋಡಿದ ಬಳಿಕ ನನಗೆ ರಾತ್ರಿ ನಿದ್ರೆಯೂ ಬರಲಿಲ್ಲ ಎಂದು ಮರಿಯಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕಂಟೆಂಟ್ ಮಾಡುವುದು ತಪ್ಪಲ್ಲ, ಆದರೆ ಯಾರದ್ದೋ ಆರೋಗ್ಯದ ವೈಫಲ್ಯಗಳನ್ನು ವಿಡಿಯೋದ ವಿಷಯವನ್ನಾಗಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವಿಡಿಯೋ ನೋಡಿದ ಬಳಿಕ ನಾನು ಸಾಕಷ್ಟು ಕಣ್ಣೀರು ಹಾಕಿದ್ದೆ ಮತ್ತು ತೀವ್ರ ಭಾವನಾತ್ಮಕ ನೋವನ್ನು ಅನುಭವಿಸಿದ್ದೇ ಎಂದು ಮರಿಯಾ ತಿಳಿಸಿದ್ದಾರೆ. ಇದೀಗ ಅಖಿನ್​ ಜೀವನದಲ್ಲಿ ನಡೆದಿರುವ ಘಟನೆಗಳನ್ನು ನೋಡಿದರೆ ನನಗೆ ಕರ್ಮದ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಅಖಿಲ್ ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸುತ್ತಿರುವ ಕಷ್ಟಗಳು ಮತ್ತು ಭಾವನಾತ್ಮಕ ಕುಸಿತವು ಅವರು ನನಗೆ ನೀಡಿದ ನೋವಿನ ಕರ್ಮದ ಫಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಅಖಿಲ್​ ವಿರುದ್ಧ ಪೋಸ್ಟ್ ಹಂಚಿಕೊಂಡ ಮರಿಯಾಗೆ ನಕಲಿ ಖಾತೆಗಳ ಮೂಲಕ ಸೈಬರ್ ಕಿರುಕುಳ ಹಾಗೂ ನಿಂದನೆಗಳು ಎದುರಾಗಿವೆ. ಅಶ್ಲೀಲ ಪದಗಳನ್ನು ಬಳಸಿ ಮರಿಯಾ ಅವರನ್ನು ಅನೇಕರು ನಿಂದಿಸುತ್ತಿದ್ದಾರೆ. ಅವರಿಗೆಲ್ಲ ತಿರುಗೇಟು ನೀಡಿರುವ ಮರಿಯಾ, ಮೊದಲು ಆ ವ್ಯಕ್ತಿಗೆ (ಅಖಿಲ್) ಹೇಳಿ, ಆ ವಿಡಿಯೋದಿಂದ ಬಂದ ಆದಾಯವನ್ನು ಬಡವರಿಗೆ ದಾನ ಮಾಡಲು ಹೇಳಿ ನಂತರ ವಿಡಿಯೋವನ್ನು ಡಿಲಿಟ್ ಮಾಡಲಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಈ ಮೂಲಕ ಟ್ರೋಲಿಂಗ್ ಮಾಡುವವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವ್ಯೂಸ್ ಮತ್ತು ಆದಾಯಕ್ಕಾಗಿ ಇತರರ ವೈಯಕ್ತಿಕ ಜೀವನ ಹಾಗೂ ಆರೋಗ್ಯದ ಸಮಸ್ಯೆಗಳನ್ನು ಗುರಿಯಾಗಿಸಿ ಟ್ರೋಲ್ ಮಾಡುವ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಘಟನೆಯು ಆನ್‌ಲೈನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇನ್ಫ್ಲುಯೆನ್ಸರ್‌ಗಳು ತಮ್ಮ ಮಿತಿಗಳನ್ನು ಮೀರಿ ವರ್ತಿಸುತ್ತಿರುವ ಪ್ರವೃತ್ತಿಯ ಬಗ್ಗೆ ಈ ವಿಷಯವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net