ಟಿ20 ವಿಶ್ವಕಪ್ 2026: ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ | Afghanistan squad

ಟಿ20 ವಿಶ್ವಕಪ್ 2026: ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ
ಟಿ20 ವಿಶ್ವಕಪ್ 2026: ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ
Published on
ಕಾಬೂಲ್: 2025ರ ಕೊನೆಯ ದಿನದಂದು, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್​ಗೆ 15 ಸದಸ್ಯರ ತಂಡವನ್ನು(Afghanistan squad) ಅಧಿಕೃತವಾಗಿ ಘೋಷಿಸಿದೆ. ಅಲ್ಲದೆ, ತಂಡವನ್ನು ಸ್ಟಾರ್ ಲೆಗ್-ಸ್ಪಿನ್ನರ್ ರಶೀದ್ ಖಾನ್ ಮುನ್ನಡೆಸಲಿದ್ದಾರೆ.

ತಂಡಕ್ಕೆ ಅನುಭವಿ ಆಟಗಾರರ ಮರಳುವಿಕೆ

ಅಹ್ಮದ್ ಶಾ ಸುಲಿಮಂಕಿಲ್ ನೇತೃತ್ವದ ಆಯ್ಕೆ ಸಮಿತಿಯು ಅನುಭವಿಗಳು ಮತ್ತು ಸ್ಫೋಟಕ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿದೆ.
ಅಫ್ಘಾನ್​ ತಂಡಕ್ಕೆ ರಶೀದ್ ಖಾನ್ ನಾಯಕರಾದ್ದಾರೆ. ಇಬ್ರಾಹಿಂ ಜದ್ರಾನ್ ಉಪನಾಯಕನಾಗಿ ಬೆಂಬಲ ನೀಡಲಿದ್ದಾರೆ. ಅಲ್ಲದೆ, ಭುಜದ ಗಾಯದಿಂದ ಚೇತರಿಸಿಕೊಂಡ ನಂತರ ವೇಗಿ ನವೀನ್-ಉಲ್-ಹಕ್ ತಂಡಕ್ಕೆ ಮರಳಿದ್ದಾರೆ. ಹಿಂದಿನ ವಿಶ್ವಕಪ್​ನಲ್ಲಿ ಹೀರೋ ಆಗಿದ್ದ ಅನುಭವಿ ಆಲ್‌ರೌಂಡರ್ ಗುಲ್ಬಾದಿನ್ ನೈಬ್​ರನ್ನು ತಂಡಕ್ಕೆ ಕರೆತಂದಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಸ್ಪಿನ್ ಬೌಲರ್​ಳೆಂದು ಹೇಳಲಾಗುವ ರಶೀದ್ ಜೊತೆಗೆ ಮುಜೀಬ್ ಉರ್ ರೆಹಮಾನ್ , ನೂರ್ ಅಹ್ಮದ್ ಮತ್ತು ಆನುಭಾವಿ ಮೊಹಮ್ಮದ್ ನಬಿ ಕೂಡ ಸೇರಿಕೊಂಡಿದ್ದಾರೆ. ತಂಡದ ಆಯ್ಕೆಯಲ್ಲಿ ಅಚ್ಚರಿಯ ನಡೆಯು ಕಂಡಿದ್ದು, ಅನುಭವಿ ಮುಜೀಬ್‌ಗೆ ಸ್ಥಳಾವಕಾಶ ಕಲ್ಪಿಸಲು ಉದಯೋನ್ಮುಖ ತಾರೆ ಎ.ಎಂ. ಗಜನ್‌ಫರ್​ರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.
T20 ವಿಶ್ವಕಪ್ ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ಇಬ್ರಾಹಿಂ ಝದ್ರಾನ್ (VC), ರಹಮಾನುಲ್ಲಾ ಗುರ್ಬಾಜ್ (WK), ಮೊಹಮ್ಮದ್ ಇಶಾಕ್ (WK), ಸೇಡಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ಶಾಹಿದುಲ್ಲಾ ಕಮಾಲ್, ಅಜ್ಮತುಲ್ಲಾ ನಬಿಬಿಬ್ದಿನ್, ಮೊಹಮದ್ ಒಮರ್ಜಾಯ್, ಮೊಹಮದ್ ಒಮರ್ಜಾಯ್, ಗುಲ್ಬದಿನ್, ಗುಲ್ಬದಿನ್ ಉರ್ ರೆಹಮಾನ್, ನವೀನ್ ಉಲ್ ಹಕ್, ಫಜಲ್ ಹಕ್ ಫಾರೂಕಿ ಮತ್ತು ಅಬ್ದುಲ್ಲಾ ಅಹ್ಮದ್ಝೈ.

ವಿಶ್ವಕಪ್‌ ದಾರಿ

ಅಫ್ಘಾನಿಸ್ತಾನವು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಯುಎಇ ಮತ್ತು ಕೆನಡಾ ಜೊತೆಗೆ ಗ್ರೂಪ್ ಡಿಯಲ್ಲಿ ಸ್ಥಾನ ಪಡೆದಿದೆ. ಇವರ ಪಂದ್ಯಗಳು 2026 ಫೆಬ್ರವರಿ 8 ರಂದು ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net