ವಿದ್ಯಾರ್ಥಿನಿಯರು, ಶಿಕ್ಷಕಿಯರ ಅಶ್ಲೀಲ ಫೋಟೋಗಳ ಮಾರಾಟ: ವಿದ್ಯಾರ್ಥಿಯ ಫೋನ್​ನಿಂದ ಭಯಾನಕ ಸಂಗತಿ ಬಯಲು! Teachers And Students

ವಿದ್ಯಾರ್ಥಿನಿಯರು, ಶಿಕ್ಷಕಿಯರ ಅಶ್ಲೀಲ ಫೋಟೋಗಳ ಮಾರಾಟ: ವಿದ್ಯಾರ್ಥಿಯ ಫೋನ್​ನಿಂದ ಭಯಾನಕ ಸಂಗತಿ ಬಯಲು! Teachers And Students
ವಿದ್ಯಾರ್ಥಿನಿಯರು, ಶಿಕ್ಷಕಿಯರ ಅಶ್ಲೀಲ ಫೋಟೋಗಳ ಮಾರಾಟ: ವಿದ್ಯಾರ್ಥಿಯ ಫೋನ್​ನಿಂದ ಭಯಾನಕ ಸಂಗತಿ ಬಯಲು! Teachers And Students
Published on: 

ಪ್ರಮುಖ ಮುಖ್ಯಾಂಶಗಳು

  • ಕೊಚ್ಚಿಯ ಕಾಲೇಜಿನಲ್ಲಿ ಶಿಕ್ಷಕಿಯರ ವಿದ್ಯಾರ್ಥಿನಿಯರ ಮಾರ್ಫ್ ಫೋಟೋ ವಿಕೃತಿ
  • ಆರೋಪಿ ಶ್ರೀಹರಿ ಮೊಬೈಲ್ ಪರಿಶೀಲನೆಯಿಂದ ಹೊರಬಿದ್ದಿದೆ ಬೆಚ್ಚಿಬೀಳಿಸುವ ಸಂಗತಿ
  • ಟೆಲಿಗ್ರಾಂ ಹಾಗೂ ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಅಸಭ್ಯ ಚಿತ್ರಗಳ ಮಾರಾಟ
  • ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕಿಯರ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ ಕೃತ್ಯ
  • ಮಾಜಿ ವಿದ್ಯಾರ್ಥಿನಿಯ ರಹಸ್ಯ ಸುಳಿವಿನಿಂದ ಬೆಳಕಿಗೆ ಬಂದ ಶಾಕಿಂಗ್ ಪ್ರಕರಣ
ತಿರುವನಂತಪುರಂ: ಕೊಚ್ಚಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ( Teachers And Students ) ಮಾರ್ಫ್ ಮಾಡಿದ ಅಸಭ್ಯ ಫೋಟೋಗಳನ್ನು ಕ್ರಿಯೇಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ಕೃತ್ಯ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಕ್ಕಾಕರ ಭರತ್ ಮಾತಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಶ್ರೀಹರಿ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಮೊಬೈಲ್ ಪರಿಶೀಲಿಸಿದಾಗ ಒಂದೊಂದಾಗಿ ಬೆಚ್ಚಿಬೀಳಿಸುವ ಸಂಗತಿಗಳು ಹೊರಬರುತ್ತಿವೆ.
ಪೊಲೀಸರ ಅನುಮತಿಯೊಂದಿಗೆ ಶ್ರೀಹರಿಯ ಮೊಬೈಲ್ ಫೋನ್ ಅನ್ನು ಪರಿಶೀಲನೆ ನಡೆಸಿದ ವಿದ್ಯಾರ್ಥಿಗಳಿಗೆ ಕೃತ್ಯದ ಭೀಕರತೆ ಕಣ್ಣಿಗೆ ಗೋಚರಿಸಿದೆ. ಫೋನ್​ ತುಂಬಾ ವಿದ್ಯಾರ್ಥಿನಿಯರ ಮಾರ್ಫ್ ಮಾಡಿದ ಅಸಭ್ಯ ಚಿತ್ರಗಳೇ ತುಂಬಿದ್ದವು. ಅಲ್ಲದೆ, ಶಿಕ್ಷಕಿಯರ ಅಶ್ಲೀಲ ಚಿತ್ರಗಳು ಕೂಡ ಇದ್ದವು.
ಕೇವಲ ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದಷ್ಟೇ ಅಲ್ಲದೆ, ಈ ಅಸಭ್ಯ ಚಿತ್ರಗಳನ್ನು ಟೆಲಿಗ್ರಾಂ ಹಾಗೂ ಇನ್‌ಸ್ಟಾಗ್ರಾಮ್​ನ ನಿರ್ದಿಷ್ಟ ಗ್ರೂಪ್‌ಗಳ ಮೂಲಕ ಹಣ ಪಡೆದು ಇತರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಮಾಹಿತಿಯು ತನಿಖೆಯಿಂದ ಬಹಿರಂಗಗೊಂಡಿದೆ. ಈ ಜಾಲವು ದೊಡ್ಡ ಮಟ್ಟದಲ್ಲಿ ವಿಸ್ತರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ತರಗತಿಗಳಲ್ಲಿ ಪಾಠ ಮಾಡುವ ಶಿಕ್ಷಕಿಯರ ದೃಶ್ಯಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಬಳಿಕ ಅತ್ಯಂತ ವಿಕೃತವಾಗಿ ಅಶ್ಲೀಲ ಚಿತ್ರಗಳನ್ನಾಗಿ ಮಾರ್ಫ್ ಮಾಡುವ ಕೃತ್ಯವನ್ನು ಆರೋಪಿ ನಡೆಸುತ್ತಿದ್ದ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ನಗ್ನ ಚಿತ್ರಗಳನ್ನು ಹಂಚಿಕೊಳ್ಳಲೆಂದೇ ಪ್ರತ್ಯೇಕವಾದ ಸಾಮಾಜಿಕ ಜಾಲತಾಣದ ಗುಂಪುಗಳು ಸಕ್ರಿಯವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಫೋನ್‌ನಲ್ಲಿರುವ ಚಿತ್ರಗಳ ಅಸಭ್ಯತೆ ಮತ್ತು ವಿಕೃತಿಯು ಕಣ್ಣು ತೆರೆದು ನೋಡಲೂ ಆಗದಷ್ಟು ಭೀಕರವಾಗಿದೆ ಎಂದು ಸ್ವತಃ ಮೊಬೈಲ್ ಪರಿಶೀಲಿಸಿದ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಕೃತ್ಯಗಳ ಕುರಿತಾದ ನಿಖರ ಮಾಹಿತಿ ಕಾಲೇಜಿನ ಆಡಳಿತ ಮಂಡಳಿಗೆ ಸೆಪ್ಟೆಂಬರ್ 1 ರಂದೇ ಅಧಿಕೃತವಾಗಿ ಲಭ್ಯವಾಗಿತ್ತು. ಕಾಲೇಜಿನ ಮಾಜಿ ವಿದ್ಯಾರ್ಥಿನಿಯೊಬ್ಬರು ನೀಡಿದ ರಹಸ್ಯ ಸುಳಿವಿನ ಆಧಾರದ ಮೇಲೆ ಶಿಕ್ಷಕರಿಗೆ ಈ ವಿಷಯ ತಿಳಿದುಬಂದಿದ್ದು, ತಕ್ಷಣವೇ ಎಚ್ಚೆತ್ತ ಕಾಲೇಜು ಪ್ರಾಧಿಕಾರವು ಬಲವಾದ ಸಾಕ್ಷ್ಯಗಳ ಸಮೇತ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ಜರುಗಿಸಲು ನೆರವಾಗಿದೆ, (ಏಜೆನ್ಸೀಸ್​).