ಬೆರ್ನ್: ಸ್ವಿಟ್ಜರ್ಲೆಂಡ್ ವಿಜ್ಞಾನಿಗಳು ಮಣ್ಣಿನ ಆರೋಗ್ಯವನ್ನು ಪರೀಕ್ಷಿಸಲು ಅತ್ಯಂತ ವಿನೂತನ ಹಾಗೂ ಅಚ್ಚರಿಯ ಪ್ರಯೋಗವೊಂದನ್ನು ನಡೆಸಿದ್ದಾರೆ. ಬರೀ ವೈಜ್ಞಾನಿಕ ಉಪಕರಣಗಳ ಮೊರೆ ಹೋಗದೆ, ಬಿಸಾಡುವ ಅಥವಾ ಬಳಸುವ 2,000 ಜೊತೆ ಒಳಉಡುಪುಗಳನ್ನು (Underwear) ವಿವಿಧ ತೋಟಗಳು ಮತ್ತು ಹುಲ್ಲುಗಾವಲುಗಳಲ್ಲಿ ಹೂತು ಹಾಕಿ ಮಣ್ಣಿನ ಗುಣಮಟ್ಟವನ್ನು ಅಳತೆ ಮಾಡುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ.