ಶಿವಸೇನಾ (UBT) ಪಕ್ಷದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಪ್ರಮುಖ ಸಭೆಗೆ ಗೈರಾಗುವುದರೊಂದಿಗೆ ಈ ವಿವಾದ ತಾರಕಕ್ಕೇರಿತು. ನಾಗೇಶ್ ಅಷ್ಟೀಕರ್, ಸಂಜಯ್ ದೇಶ್ಮುಖ್, ಸಂಜಯ್ ಜಾಧವ್, ಸಂಜಯ್ ದಿನಾ ಪಾಟೀಲ್, ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಭೌಸಾಹೇಬ್ ವಾಕಚೌರೆ ಸಭೆಗೆ ಗೈರಾದ ಸಂಸದರಾಗಿದ್ದಾರೆ. ಆದರೆ, ಹಿರಿಯ ನಾಯಕರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ರಾಜಾಭಾವು ವಾಜೆ ಮತ್ತು ಸಂಜಯ್ ರಾವುತ್ ಸಭೆಯಲ್ಲಿ ಉಪಸ್ಥಿತರಿದ್ದರು.