ಸಿಯಾ ಪದೇ ಪದೇ ಕೇತನ್ನನ್ನು ಲೋಹಗಢ್ ಕೋಟೆಗೆ (ಸಮುದ್ರ ಮಟ್ಟದಿಂದ 3,300 ಅಡಿ ಎತ್ತರದಲ್ಲಿದೆ) ಬರುವಂತೆ ಒತ್ತಾಯಿಸುತ್ತಿದ್ದಳು. ಮೇ 31 ರಂದು ಇಬ್ಬರೂ ಕೋಟೆಗೆ ಹೋಗಿದ್ದರು. ಜೂನ್ 4 ರಂದು ಮತ್ತೊಮ್ಮೆ ಹೋಗಲು ಪ್ಲಾನ್ ಮಾಡಿದ್ದಾಗ ಕೇತನ್ ತಾಯಿ ಅದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ. ಅಚ್ಚರಿಯ ವಿಷಯವೆಂದರೆ ಜೂನ್ 14 ರಂದು ನಡೆದ ಮತ್ತೊಂದು ಭೇಟಿಯ ವೇಳೆ, ಸಿಯಾ ಆತನನ್ನು ಕಂದಕಕ್ಕೆ ತಳ್ಳಲು ಯತ್ನಿಸಿದ್ದಳು, ಆದರೆ ಕೇತನ್ ಅದೃಷ್ಟವಶಾತ್ ಪೊದೆಯೊಂದನ್ನು ಹಿಡಿದು ಬದುಕುಳಿದಿದ್ದನು. ಯಾಕೆ ಹೀಗೆ ಮಾಡಿದೆ..? ಎಂದು ಕೇತನ್ ಕೇಳಿದಾಗ, ಅಲ್ಲಿ ಹಾವು ಇತ್ತು, ನಿನ್ನನ್ನು ರಕ್ಷಿಸಲು ಹಾಗೆ ಮಾಡಿದೆ ಎಂದು ಸಿಯಾ ಸುಳ್ಳು ಹೇಳಿ ನಂಬಿಸಿದ್ದಳು. ಆದರೆ ಕೊನೆಗೂ ಜೂನ್ 18 ರಂದು ಪ್ರಿಯಕರನ ಜೊತೆಗೂಡಿ ಆತನನ್ನು ಕಡಿದಾದ ಕಣಿವಿಗೆ ತಳ್ಳಿ ತನ್ನ ಹಠವನ್ನು ಸಾಧಿಸಿದ್ದಾಳೆ(ಏಜೆನ್ಸೀಸ್).