ಇಂದಿನಿಂದ ಎರಡನೇ ಹಂತದ ಬಜೆಟ್ ಅಧಿವೇಶನ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲೆ ಚರ್ಚೆ ಸಾಧ್ಯತೆ | Budget Session
ಲೋಕಸಭೆ ಸ್ಪೀಕರ್ ಓಂ ಬಿರ್ಲಾ
Published on:
Copied
Follow Us
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ(Budget Session) ಎರಡನೇ ಹಂತದ ಕಲಾಪಗಳು ಇಂದಿನಿಂದ ಪ್ರಾರಂಭವಾಗಲಿದ್ದು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ನೀಡಿರುವ ಅವಿಶ್ವಾಸ ನಿರ್ಣಯದ ಮೇಲೆ ಮೊದಲ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಪಕ್ಷಪಾತ, ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ ಆರೋಪ ಮೇಲೆ ಕಾಂಗ್ರೆಸ್ ಸ್ಪೀಕರ್ ವಿರುದ್ದ ಲೋಕಸಭೆ ಕಾರ್ಯದರ್ಶಿಗೆ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿತ್ತು. ಅದಕ್ಕೆ ಕಾಂಗ್ರೆಸ್ ಸೇರಿ 118 ಜನ ವಿರೋಧ ಪಕ್ಷಗಳು ಸಂಸದರು ಸಹಿ ಹಾಕಿದ್ದರು.
ಮೊದಲಿಗೆ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕದೇ ಹಿಂದೆ ಸರಿದಿದ್ದ ತೃಣಮೂಲ ಕಾಂಗ್ರೆಸ್ ಪಕ್ಷವು, ಇತ್ತೀಚಿಗೆ ಅವಿಶ್ವಾದ ನಿರ್ಣಯವನ್ನು ಬೆಂಬಲಿಸುವುದಾಗಿ ಹೇಳಿದೆ. ಕಾಂಗ್ರೆಸ್‌ನ ಮೊಹಮ್ಮದ್ ಜಾವೇದ್, ಕೋಡಿಕುನ್ನಿಲ್ ಸುರೇಶ್ ಮತ್ತು ಮಲ್ಲು ರವಿ ಅವರು ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ಸಲ್ಲಿಸಿದ್ದರು.
ಸ್ಪೀಕರ್ ವಿರುದ್ಧ ನೀಡಿರುವ ಅವಿಶ್ವಾಸ ನಿರ್ಣಯದ ನೋಟಿಸ್ನಲ್ಲಿ, ಸ್ಪೀಕರ್ ಪಕ್ಷಪಾತದ ವರ್ತನೆ ತೋರಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಮಹಿಳಾ ಸಂಸದರ ವಿರುದ್ಧ ಆಧಾರರಹಿತ ಆರೋಪ ಮತ್ತು ಎಂಟು ವಿಪಕ್ಷಗಳ ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಿದ್ದನ್ನು ಉಲ್ಲೇಖಿಸಲಾಗಿದೆ.
ಇನ್ನೂ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನಿಯಮಗಳ ಪ್ರಕಾರ, ಇಬ್ಬರು ಸಂಸದರ ಸಹಿ, 14 ದಿನಗಳ ನೋಟಿಸ್ ಮತ್ತು ಸದನದಲ್ಲಿ 50 ಸದಸ್ಯರ ಬೆಂಬಲ ಅಗತ್ಯ. ಸೂಚನೆ ಅಂಗೀಕರಿಸಲ್ಪಟ್ಟ ಬಳಿಕ ರ್ಚೆಗೆ ಸಮಯವನ್ನು ನಿಗದಿಪಡಿಸಲಾಗುತ್ತದೆ ಮತ್ತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತದೆ.
ಈ ಚರ್ಚೆ ವೇಳೆ ಸ್ಪೀಕರ್ ತಮ್ಮ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಿಲ್ಲ, ಚರ್ಚೆ ಕಲಾಪಗಳನ್ನು ಉಪಸ್ಪೀಕರ್ ನಡೆಸಬೇಕು. ಉಪ ಸ್ಪೀಕರ್ ಅನುಪಸ್ಥಿತಿಯಲ್ಲಿ, ಸ್ಪೀಕರ್ ಸಮಿತಿಯಲ್ಲಿರುವ ಅತ್ಯಂತ ಹಿರಿಯ ಸಂಸದರು ಅಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎನ್ನಲಾಗಿದೆ.
ಇನ್ನೂ ಲೋಕಸಭೆಯ ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲು 272 ಸರಳ ಬಹುಮತದ ಅಗತ್ಯವಿದೆ. ಆದರೆ ತೃಣಮೂಲ ಕಾಂಗ್ರೆಸ್ ಬೆಂಬಲವಿದ್ದರೂ ವಿರೋಧ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ. ಪ್ರಸ್ತುತ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ 293 ಸಂಸದರ ಬೆಂಬಲವನ್ನು ಹೊಂದಿದೆ. ಬಿಜೆಪಿಯಿಂದ 240, ಜೆಡಿಯುನಿಂದ 16, ಟಿಡಿಪಿಯಿಂದ 12 ಮತ್ತು ಇತರ ಸಂಸದರ ಬೆಂಬಲಿವೆ.
ಆದರೆ ವಿಪಕ್ಷಗಳ ಇಂಡಿಯಾ ಕೂಟ 238 ಸಂಸದರನ್ನು ಹೊಂದಿದ್ದು, ಅದರಲ್ಲಿ 99 ಮಂದಿ ಕಾಂಗ್ರೆಸ್ ಉಳಿದವರು ಸಮಾಜವಾದಿ ಪಕ್ಷ, ಡಿಎಂಕೆ, ತೃಣಮೂಲ ಕಾಂಗ್ರೆಸ್ ಸೇರಿ ವಿಪಕ್ಷಗಳ ಸಂಸದರು. ಈ ಹಿನ್ನೆಲೆ ವಿಪಕ್ಷಗಳ ಅವಿಶ್ವಾಸ ನಿರ್ಣಯ ಬಿದ್ದು ಹೋಗುವ ಸಾಧ್ಯತೆ ಇದೆ (ಏಜೆನ್ಸೀಸ್),