ಟ್ರಂಪ್ ಎಚ್ಚರಿಕೆ ನಡುವೆಯೇ ಇರಾನ್ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ನೇಮಕ | Mojtaba Khamenei

ಮೊಜ್ತಬಾ ಖಮೇನಿ
ಮೊಜ್ತಬಾ ಖಮೇನಿ
Published on
ಟೆಹ್ರಾನ್: ಅಮೆರಿಕಾ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆಯೇ ಇರಾನ್ ಮುಂದಿನ ಸರ್ವೋಚ್ಚ ನಾಯಕನಾಗಿ ಹತ್ಯೆಯಾದ ಅಯತೊಲ್ಲಾ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿಯವರನ್ನು(Mojtaba Khamenei) ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.
ಇರಾನ್​ನಲ್ಲಿ ಮುಂದಿನ ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿರುವ 88 ಧರ್ಮಗುರುಗಳ ಸಭೆಯಲ್ಲಿ ಸರ್ವಾನುಮತದಿಂದ, ತಂದೆ ಅಯತೊಲ್ಲಾ ಅಲಿ ಖಮೇನಿ ಆಡಳಿತದ ಸಮಯದಲ್ಲಿ ಇರಾನ್‌ನ ಭದ್ರತಾ ಪಡೆಗಳಲ್ಲಿ ಮತ್ತು ವ್ಯಾಪಾರ ಜಾಲಗಳಲ್ಲಿ ಪ್ರಭಾವ ಹೊಂದಿದ್ದ ಮೊಜ್ತಬಾ ಅವರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಧ್ಯರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಧರ್ಮಗುರುಗಳ ಸಮಿತಿಯು, ತಜ್ಞರ ಸಭೆಯು ನಿರ್ಣಾಯಕ ಮತದ ಮೂಲಕ, ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ಪವಿತ್ರ ವ್ಯವಸ್ಥೆಯ ಮೂರನೇ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದೆ.

ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಇನ್ನೂ ಇರಾನ್​ನಲ್ಲಿ ಕಟ್ಟರ್ ಆಡಳಿತವನ್ನು ವಿರೋಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊಜ್ತಬಾ ಖಮೇನಿ ನೇಮಕವನ್ನು ವಿರೋಧಿಸುವ ಸಾಧ್ಯತೆ ಇದೆ. ಭಾನುವಾರ ಈ ಕುರಿತು ಎಬಿಸಿ ನ್ಯೂಸ್​ಗೆ ಮಾತನಾಡಿದ್ದ ಅವರು, ಅಲ್ಲಿ ಅಧಿಕಾರಕ್ಕೆ ಬರುವ ನಾಯಕರು ನಮ್ಮಿಂದ ಅನುಮೋದನೆ ಪಡೆಯದಿದ್ದರೆ, ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಫೆ. 28ರಂದು ಇಸ್ರೇಲ್-ಅಮೆರಿಕ ಜಂಟಿಯಾಗಿ ನಡೆದ ಆಪರೇಷನ್ ಕ್ಯೂರಿ ಕಾರ್ಯಾಚರಣೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಆಗಿದ್ದ ಮತ್ತು ಹಾಲಿ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಕುಟುಂಬಸ್ಥರೊಂಗೆ ಮೃತಪಟ್ಟಿದ್ದರು. 
ಇನ್ನೂ ಇರಾನ್ ಮತ್ತು ಇಸ್ರೇಲ್-ಅಮೆರಿಕ ಯುದ್ದದಲ್ಲಿ ಇಲ್ಲಿಯವಗೆ, 1,332 ಇರಾನಿನ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ರಾಯಭಾರಿ ಕಚೇರಿ ಮಾಹಿತಿ ನೀಡಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net