ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ; 91.64 ಕ್ಕೆ ತಲುಪಿದ ಮೌಲ್ಯ | Rupee value falls
ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ; 91.64 ಕ್ಕೆ ತಲುಪಿದ ಮೌಲ್ಯ
Published on:
Copied
Follow Us
ಮುಂಬೈ: ಭಾರತದ ಆರ್ಥಿಕತೆಗೆ ಇಂದು ಭಾರಿ ಹಿನ್ನಡೆಯಾಗಿದ್ದು, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ(Rupee value falls) ಬುಧವಾರ (ಜ.21) 67 ಪೈಸೆ ಕುಸಿಯುವ ಮೂಲಕ 91.64 ಎಂಬ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಜಾಗತಿಕ ಮಟ್ಟದ ಅನಿಶ್ಚಿತತೆ ಮತ್ತು ವಿದೇಶಿ ಹೂಡಿಕೆದಾರರು ಸತತವಾಗಿ ಹಣ ಹಿಂಪಡೆಯುತ್ತಿದ್ದಾರೆ. ಈ ಐತಿಹಾಸಿಕ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ದಾಖಲೆ ಮುರಿದ ಕುಸಿತ
ಕಳೆದ 2025ರ ಡಿಸೆಂಬರ್ 16ರಂದು ರೂಪಾಯಿ ಮೌಲ್ಯವು 91.14 ಕ್ಕೆ ತಲುಪಿದ್ದು ಕನಿಷ್ಠ ಮಟ್ಟವಾಗಿತ್ತು. ಆದರೆ ಇಂದು ಆ ದಾಖಲೆಯನ್ನೂ ಮೀರಿ ರೂಪಾಯಿ ಪಾತಾಳಕ್ಕೆ ಕುಸಿದಿದೆ. ಈ ವರ್ಷದ ಜನವರಿ ತಿಂಗಳೊಂದರಲ್ಲೇ ರೂಪಾಯಿ ಮೌಲ್ಯದಲ್ಲಿ ಶೇ.1.50 ರಷ್ಟು ಇಳಿಕೆಯಾಗಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ವಹಿವಾಟು ಆರಂಭವಾದಾಗಿನಿಂದ ರೂಪಾಯಿ ಮೇಲೆ ತೀವ್ರ ಒತ್ತಡ ಕಂಡುಬಂದಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಆರ್ಥಿಕ ನೀತಿಗಳ ಬದಲಾವಣೆಯ ಆತಂಕ ಹೂಡಿಕೆದಾರರಲ್ಲಿ ರಿಸ್ಕ್-ಆಫ್ (ರಿಸ್ಕ್-ಆಫ್) ಮನೋಭಾವವನ್ನು ಹೊಂದಿದೆ. ತಮ್ಮ ಹೂಡಿಕೆಯನ್ನು ಸುರಕ್ಷಿತವಾಗಿರುವ ಡಾಲರ್‌ನತ್ತ ಬೆಳೆಯುತ್ತಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯುತ್ತಿರುವುದು ರೂಪಾಯಿಯನ್ನು ದುರ್ಬಲಗೊಳಿಸುತ್ತಿದೆ.
ಭೌಗೋಳಿಕ ರಾಜಕೀಯ ಅಸ್ಥಿರತೆ
ವಿಶ್ವದ ವಿವಿಧೆಡೆ ನಡೆಯುತ್ತಿರುವ ಸಂಘರ್ಷಗಳು ಮತ್ತು ಅಮೆರಿಕದ ಸುಂಕ ಸಮರದ ಆತಂಕವು ಡಾಲರ್ ಬಲಗೊಳ್ಳುತ್ತಿದೆ.
ಕಚ್ಚಾ ತೈಲ ಬೆಲೆ ಏರಿಕೆ
ತೈಲ ಆಮದು ಮಾಡಿಕೊಳ್ಳಲು ಭಾರತವು ಹೆಚ್ಚಿನ ಡಾಲರ್ ಪಾವತಿಸಬೇಕಾದಾಗ ಸ್ಥಳೀಯ ಕರೆನ್ಸಿಯ ಮೇಲೆ ಒತ್ತಡ ಹೆಚ್ಚುತ್ತಿದೆ.
ಸಾಮಾನ್ಯ ಜನರ ಮೇಲೆ ಏನು ಪರಿಣಾಮ..?
ರೂಪಾಯಿ ಮೌಲ್ಯ ಇಷ್ಟೊಂದು ಕುಸಿದಿರುವುದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ
ಕಚ್ಚಾ ತೈಲ ಆಮದು ದುಬಾರಿಯಾಗುವುದರಿಂದ ದೇಶೀಯವಾಗಿ ಇಂಧನ ಬೆಲೆಗಳು ಏರಿಕೆಯಾಗಲಿವೆ. ಅಲ್ಲದೆ, ಸರಕುಗಳ ಸಾಗಾಣಿಕೆ ವೆಚ್ಚ ಹೆಚ್ಚಾಗುವುದರಿಂದ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ವಿದೇಶಿ ಶಿಕ್ಷಣ ಮತ್ತು ಪ್ರವಾಸ
ಅಮೆರಿಕ ಅಥವಾ ಇತರ ದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳು ಮತ್ತು ಶಿಕ್ಷಣಕ್ಕೆ ಈಗ ಹೆಚ್ಚಿನ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಿಸರ್ವ್ ಬ್ಯಾಂಕ್ (RBI) ನಡೆ ಏನು?
ರೂಪಾಯಿ ಮೌಲ್ಯದ ತೀವ್ರ ಏರಿಳಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಮ ಮಧ್ಯಪ್ರವೇಶಿಸಿ ಡಾಲರ್‌ಗಳನ್ನು ಮಾರಾಟ ಮಾಡುವ ಮೂಲಕ ಸ್ಥಿರತೆ ತರಲು ಪ್ರಯತ್ನಿಸುತ್ತಿದೆ. ಅದರೆ, ಜಾಗತಿಕ ಒತ್ತಡದ ಮುಂದೆ ಈ ಕ್ರಮಗಳು ಆ ಮಟ್ಟಿಗೆ ಫಲ ನೀಡುವುದಿಲ್ಲ,(ಏಜೆನ್ಸೀಸ್).