ರಾಜ್ಯದಲ್ಲಿ ಬರೋಬ್ಬರಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಇವರದ್ದೇ ಅಧಿಕೃತ ದಾಖಲೆಗಳು ಹೇಳುತ್ತಿವೆ. ಶಾಸಕ ಆರ್.ವಿ. ದೇಶಪಾಂಡೆ ಸಮಿತಿ ವರದಿಯ ಪ್ರಕಾರ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳು ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿದ್ದಾರೆ. ಆದರೂ ಹುದ್ದೆಗಳನ್ನು ಭರ್ತಿ ಮಾಡದ ಈ ಸರ್ಕಾರ, ಯುವಕರ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿದೆ. ರಾಜ್ಯದಲ್ಲಿ ಸದ್ಯಕ್ಕೆ 5.72 ಲಕ್ಷಕ್ಕೂ ಹೆಚ್ಚು ಸರ್ವೇ ಅರ್ಜಿಗಳು ಬಾಕಿ ಉಳಿದಿವೆ. ಭೂಮಾಪಕರಿಲ್ಲದೆ ಜಮೀನು ಅಳತೆ, ಪೋಡಿ, ನಕ್ಷೆ ತಯಾರಿಕೆಗೆ ಅನ್ನದಾತರು ವರ್ಷಗಟ್ಟಲೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಸಕಾಲಕ್ಕೆ ದಾಖಲೆ ಸಿಗದೆ ಬೆಳೆ ಸಾಲವೂ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಡಿಕೆಶಿ ಅವರು, ರಿಯಲ್ ಎಸ್ಟೇಟ್ ದಂಧೆ, ಕಮಿಷನ್ ಲೂಟಿಯಲ್ಲಿ ಬ್ಯುಸಿಯಾಗಿರುವ ನಿಮಗೆ ಯುವಕರ, ರೈತರ ಕಷ್ಟ ಕಾಣಿಸುತ್ತಿಲ್ಲವೇ?. ಉದ್ಯೋಗಾಕಾಂಕ್ಷಿಗಳಿಂದ ವಸೂಲಿ ಮಾಡಿದ ಕೋಟ್ಯಂತರ ರೂಪಾಯಿ ಹಣ ಯಾರ ಜೇಬು ಸೇರಿದೆ? ಯುವಕರ ಅರ್ಜಿ ಶುಲ್ಕದಲ್ಲೂ ನಿಮ್ಮ ಕಮಿಷನ್ ಕಾರುಬಾರು ನಡೆಯುತ್ತಿದೆಯೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.