ಸದ್ಯ ಭಾರತದ ಸ್ವದೇಶಿ ಜಲಾಂತರ್ಗಾಮಿಗಳ ಆಧುನೀಕರಣ ಯೋಜನೆಗಳು ಮತ್ತು ಹೊಸ ಪರಮಾಣು ಸಬ್‌ಮರೀನ್‌ಗಳ ನಿರ್ಮಾಣ ಕಾರ್ಯಗಳು ಹಲವು ವರ್ಷಗಳ ವಿಳಂಬವನ್ನು ಎದುರಿಸುತ್ತಿವೆ. ಇಂತಹ ನಿರ್ಣಾಯಕ ಸಮಯದಲ್ಲಿ, ಡಿಆರ್‌ಡಿಒ ರೂಪಿಸಿರುವ ಈ ಅಂಡರ್‌ವಾಟರ್ ಸಿಸ್ಟಮ್ ಭಾರತೀಯ ನೌಕಾಸೇನೆಗೆ ಆನೆಬಲ ತರಲಿದೆ. ಮೈದಾನದಲ್ಲಿ ಯಾವುದೇ ಅಬ್ಬರವಿಲ್ಲದೆ, ಸಾಗರದ ಅಲೆಗಳ ಅಡಿಯಲ್ಲಿ ಅತ್ಯಂತ ಸೈಲೆಂಟ್ ಆಗಿ ದಿನದ 24 ಗಂಟೆಯೂ ನಿರಂತರ ಕಣ್ಗಾವಲು ನಡೆಸುವ ಮೂಲಕ, ವೈರಿ ದೇಶಗಳ ಯಾವುದೇ ಕುತಂತ್ರಗಳು ಭಾರತದ ಗಡಿಯೊಳಗೆ ನಡೆಯದಂತೆ ತಡೆಯಲು ಈ ತಂತ್ರಜ್ಞಾನ ನೌಕಾಸೇನೆಗೆ ಬ್ರಹ್ಮಾಸ್ತ್ರವಾಗಲಿದೆ, (ಏಜೆನ್ಸೀಸ್).