ಇನ್ನು 2025 ಮತ್ತು 2026ರ ಯುಎಸ್ ರಕ್ಷಣಾ ಇಲಾಖೆಯ ಬಜೆಟ್ನಲ್ಲಿ ವಿವರಿಸಿರುವಂತೆ, ವಿಮಾನಗಳ ಹಾರಾಟದ ಅವಧಿ, ಅದರ ನಿರ್ವಹಣಾ ವೆಚ್ಚಗಳು ಮತ್ತು ಯುದ್ಧಸಾಮಗ್ರಿ ಬಳಕೆಯ ಆಧಾರದ ಮೇಲೆ, ಈ ಫೈಟರ್ ಜೆಟ್ಗಳ ಹಾರಾಟಕ್ಕೆ ಸುಮಾರು 271.34 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಯುದ್ಧದಲ್ಲಿ ಮುಂಚೂಣಿಯ ಯುದ್ಧ ವಿಮಾನಗಳಲ್ಲದೆ, ವಿಶೇಷ ವಿಮಾನಗಳು ಸಹ ಭಾಗಿಯಾಗಿದ್ದವು. ಇವುಗಳಲ್ಲಿ EA-18G ಗ್ರೋಲರ್ ಎಲೆಕ್ಟ್ರಾನಿಕ್ ಯುದ್ಧ ವಿಮಾನಗಳು, A-10C ಥಂಡರ್ಬೋಲ್ಟ್ ದಾಳಿ ವಿಮಾನಗಳು ಮತ್ತು MQ-9 ರೀಪರ್ ಡ್ರೋನ್ಗಳು, ಇದರ ಜೊತೆಗೆ ಕಡಿಮೆ-ವೆಚ್ಚದ ಮಾನವರಹಿತ ಯುದ್ಧ ದಾಳಿ ವ್ಯವಸ್ಥೆ (LUCAS)ಯೂ ಸೇರಿವೆ. ಹೀಗಾಗಿ, ವೆಚ್ಚವು ಸಹಜವಾಗಿಯೇ ಏರಿಕೆಯಾಗಿದೆ.