ಕೋಟಿ ಕೋಟಿ ಆಸ್ತಿ ಇದ್ದರೇನು ಮಗುವಿನ ಮುಂದೆ ಎಲ್ಲವೂ ಗೌಣ: ಅಂಬಾನಿ ಸೊಸೆಯ ಸರಳತೆಗೆ ನೆಟ್ಟಿಗರು ಫಿದಾ! Mukesh Ambani

ಕೋಟಿ ಕೋಟಿ ಆಸ್ತಿ ಇದ್ದರೇನು ಮಗುವಿನ ಮುಂದೆ ಎಲ್ಲವೂ ಗೌಣ: ಅಂಬಾನಿ ಸೊಸೆಯ ಸರಳತೆಗೆ ನೆಟ್ಟಿಗರು ಫಿದಾ! Mukesh Ambani
ಕೋಟಿ ಕೋಟಿ ಆಸ್ತಿ ಇದ್ದರೇನು ಮಗುವಿನ ಮುಂದೆ ಎಲ್ಲವೂ ಗೌಣ: ಅಂಬಾನಿ ಸೊಸೆಯ ಸರಳತೆಗೆ ನೆಟ್ಟಿಗರು ಫಿದಾ! Mukesh Ambani
Published on

ಪ್ರಮುಖ ಮುಖ್ಯಾಂಶಗಳು

  • ಮುಕೇಶ್ ಅಂಬಾನಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು
  • ಅಂಬಾನಿ ಕುಟುಂಬ ಏನು ಬಯಸುತ್ತದೆಯೋ ಅದನ್ನು ಕೆಲವೇ ಸೆಕೆಂಡುಗಳಲ್ಲಿ ಪಡೆಯುವಷ್ಟು ಸಂಪತ್ತು ಅವರ ಬಳಿ ಇದೆ
  • ಅಂಬಾನಿ ಅವರ ಮಕ್ಕಳು ಮತ್ತು ಸೊಸೆಯಂದಿರು ಏನು ಬಯಸುತ್ತಾರೋ ಅದು ನಡೆದೇ ನಡೆಯುತ್ತದೆ
  • ಐಷಾರಾಮಿ ಜೀವನ ನಡೆಸುವ ಅಂಬಾನಿ ಕುಟುಂಬಸ್ಥರು ಕೆಲವೊಮ್ಮ ಸರಳತೆಯಿಂದಲೇ ಸುದ್ದಿಯಾಗುತ್ತಾರೆ
Mukesh Ambani : ಮುಕೇಶ್ ಅಂಬಾನಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಭಾರತದಲ್ಲಿ ನಂಬರ್​ ಒನ್​ ಶ್ರೀಮಂತರಾದರೆ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿಯೂ ಒಬ್ಬರು. ಅಂಬಾನಿ ಕುಟುಂಬ ಏನು ಬಯಸುತ್ತದೆಯೋ ಅದನ್ನು ಕೆಲವೇ ಸೆಕೆಂಡುಗಳಲ್ಲಿ ಪಡೆಯುವಷ್ಟು ಸಂಪತ್ತು ಅವರ ಬಳಿ ಇದೆ. ಹೇಳಬೇಕೆಂದರೆ, ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ.
ಅಂಬಾನಿ ಅವರ ಮಕ್ಕಳು ಮತ್ತು ಸೊಸೆಯಂದಿರು ಏನು ಬಯಸುತ್ತಾರೋ ಅದು ನಡೆದೇ ನಡೆಯುತ್ತದೆ. ಸುಖದ ಸುಪ್ಪತ್ತಿಗೆಯಲ್ಲಿ ಜೀವನ ನಡೆಸುವ ಅಂಬಾನಿ ಕುಟುಂಬಸ್ಥರು ಕೆಲವೊಮ್ಮೆ ಐಷಾರಾಮಿ ಜೀವನದಿಂದ ಸುದ್ದಿಯಾದರೆ, ಇನ್ನು ಕೆಲವೊಮ್ಮ ತಮ್ಮ ಸರಳತೆಯಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇದೀಗ ಅಂಬಾನಿ ಕುಟುಂಬದ ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಅವರು ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಏಪ್ರಿಲ್ 19 ರಂದು ಮುಕೇಶ್​ ಅಂಬಾನಿ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಅಂದು ಅವರ ಕುಟುಂಬದ ಸದಸ್ಯರು ಮುಂಬೈನ ಪ್ರಸಿದ್ಧ ಸಿದ್ಧ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಕೇಶ್​ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ, ಪುತ್ರರಾದ ಆಕಾಶ್ ಮತ್ತು ಅನಂತ್ ಅಂಬಾನಿ, ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಮತ್ತು ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಗಳು ಇಶಾ ಅಂಬಾನಿ ಮತ್ತು ಅವರ ಅವಳಿ ಮಕ್ಕಳಾದ ಕೃಷ್ಣ ಮತ್ತು ಆದ್ಯ ಕೂಡ ಆಗಮಿಸಿದ್ದರು.
ಈ ಸಂದರ್ಭದಲ್ಲಿ, ಶ್ಲೋಕಾ ಮೆಹ್ತಾ ಅವರು ನೀಲಿ ಬಣ್ಣದ ಸೂಟ್‌ನಲ್ಲಿ ತುಂಬಾ ಸರಳವಾಗಿ ಮತ್ತು ಸೊಗಸಾಗಿ ಕಾಣುತ್ತಿದ್ದರು. ಈ ವೇಳೆ ಶ್ಲೋಕಾ ಅವರು ಇಶಾ ಅಂಬಾನಿಯ ಪುತ್ರ ಕೃಷ್ಣನನ್ನು ಮಡಿಲಲ್ಲಿ ಹೊತ್ತುಕೊಂಡು, ಕೈಯಲ್ಲಿ ಆತನ ಚಪ್ಪಲಿಗಳನ್ನು ಹಿಡಿದು ದೇವಸ್ಥಾನಕ್ಕೆ ಹೆಜ್ಜೆಹಾಕಿದರು. ಯಾವುದೇ ಮೇಕಪ್ ಇಲ್ಲದೆ ತುಂಬಾ ಸರಳವಾಗಿ ಕಾಣುತ್ತಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾರ್ವಜನಿಕವಾಗಿ ಸಾವಿರಾರು ಜನರ ನಡುವೆ ನಡೆಯುತ್ತಿದ್ದಾಗಲೂ, ಯಾವುದೇ ಆಡಂಬರವಿಲ್ಲದೆ ತಮ್ಮ ನಾದಿನಿಯ ಮಗುವನ್ನು ಎತ್ತಿಕೊಂಡು, ಕೈಯಲ್ಲಿ ಚಪ್ಪಲಿಗಳನ್ನು ಹಿಡಿದುಕೊಂಡು ಸಾಗುತ್ತಿರುವ ದೃಶ್ಯ ಅವರ ನೈಜ ಸರಳತೆಯನ್ನು ಬಿಂಬಿಸುತ್ತದೆ. ಕೋಟಿ ಕೋಟಿ ಆಸ್ತಿ, ಕೆಲಸಗಾರರ ಪಡೆ ಇದ್ದರೂ ಸಹ, ಮಗುವಿನ ಜೋಪಾನವೇ ತನಗೆ ಮುಖ್ಯ ಎಂಬ ಅವರ ಈ ನಡವಳಿಕೆ "ಶ್ರೀಮಂತಿಕೆ ಇರುವುದು ಹಣದಲ್ಲಲ್ಲ, ಗುಣದಲ್ಲಿ" ಎಂಬ ಮಾತನ್ನು ಸಾಬೀತುಪಡಿಸಿದೆ.
ಕೈಗೊಬ್ಬ, ಕಾಲಿಗೊಬ್ಬ ಆಳುಗಳಿರುವ ಅಂಬಾನಿ ಕುಟುಂಬದಲ್ಲಿ ಶ್ಲೋಕಾ ಮೆಹ್ತಾ ಅವರು ನಡೆದುಕೊಂಡ ರೀತಿ ನಿಜಕ್ಕೂ ಅದ್ಭುತ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅವರ ಈ ನಮ್ರತೆಯನ್ನು ಮೆಚ್ಚಿ, ಕೊಂಡಾಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net