ಆ ಮೊನಾಲಿಸಾ ಜತೆ ನನ್ನ... ಕುಂಭಮೇಳ ಸುಂದರಿಗೆ ಕನ್ವರ್ ಯಾತ್ರೆಯ ವೈರಲ್ ಬ್ಯೂಟಿ ಮಾನಸಿ ಟಾಂಗ್​...! Manasi Thakur

ಆ ಮೊನಾಲಿಸಾ ಜತೆ ನನ್ನ... ಕುಂಭಮೇಳ ಸುಂದರಿಗೆ ಕನ್ವರ್ ಯಾತ್ರೆಯ ವೈರಲ್ ಬ್ಯೂಟಿ ಮಾನಸಿ ಟಾಂಗ್​...! Manasi Thakur
ಆ ಮೊನಾಲಿಸಾ ಜತೆ ನನ್ನ... ಕುಂಭಮೇಳ ಸುಂದರಿಗೆ ಕನ್ವರ್ ಯಾತ್ರೆಯ ವೈರಲ್ ಬ್ಯೂಟಿ ಮಾನಸಿ ಟಾಂಗ್​...! Manasi Thakur
Published on

ಪ್ರಮುಖ ಮುಖ್ಯಾಂಶಗಳು

  • ಮೊನಾಲಿಸಾ ಜೊತೆಗಿನ ಹೋಲಿಕೆಯನ್ನು ತಳ್ಳಿಹಾಕಿದ ಮಾನಸಿ ಠಾಕೂರ್
  • ಶಿವನ ಭಕ್ತಿಗಾಗಿ ಮಾತ್ರ ನನ್ನನ್ನು ಗುರುತಿಸಿ ಎಂದು ಮನವಿ
  • ಹಿಂದೂ ಧರ್ಮವನ್ನು ಪ್ರತಿನಿಧಿಸುವುದಾಗಿ ಸ್ಪಷ್ಟಪಡಿಸಿದ ಯುವತಿ
  • 180 ಕಿಲೋಮೀಟರ್ ಯಾತ್ರೆಯಿಂದ ಜನಪ್ರಿಯತೆ ಪಡೆದ ಮಾನಸಿ
Manasi Thakur : ಮಾನಸಿ ಠಾಕೂರ್ (ಮಾನಸಿ ರೇಪೂತ್ ಅಂತಾನೂ ಕರೆಯುತ್ತಾರೆ) ಹೆಸರಿನ ಯುವತಿಯೊಬ್ಬಳು ಸುಮಾರು 61 ಲೀಟರ್ ಸಾಮರ್ಥ್ಯದ ಬೃಹತ್ ಕನ್ವರ್ ಅನ್ನು ಹೊತ್ತುಕೊಂಡು, ಬರೋಬ್ಬರಿ 180 ಕಿಲೋಮೀಟರ್ ದೂರದ ಕನ್ವರ್ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಇದರೊಂದಿಗೆ ಅವರ ವಿಶಿಷ್ಟ ಕಂದು ಬಣ್ಣದ ಕಣ್ಣುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿವೆ. ಹೀಗಾಗಿ, ಆಕೆಯನ್ನು ಮಹಾಕುಂಭಮೇಳದ ವೈರಲ್​ ಹುಡುಗಿ ಮೊನಾಲಿಸಾಗೆ ಹೋಲಿಕೆ ಮಾಡುತ್ತಿದ್ದಾರೆ.
ಮೊನಾಲಿಸಾ ಜತೆಗಿನ ಹೋಲಿಕೆಗಳು ಮತ್ತು ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಮಾನಸಿ ಠಾಕೂರ್, ತನಗೆ ಆ ರೀತಿಯ ಯಾವುದೇ ಹೋಲಿಕೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾವು ಕೇವಲ ಹಿಂದೂ ಧರ್ಮದ ಅನುಯಾಯಿ ಹಾಗೂ ಮಹಾದೇವನ ಪರಮ ಭಕ್ತೆ ಎಂದು ಮಾನಸಿ ಹೇಳಿಕೊಂಡಿದ್ದಾರೆ. ಮತ್ತೊಬ್ಬ ವೈರಲ್ ವ್ಯಕ್ತಿಯೊಂದಿಗೆ ಹೋಲಿಕೆ ಮಾಡಿಸಿಕೊಳ್ಳುವುದಕ್ಕಿಂತ, ಶಿವನ ಮೇಲಿನ ತನ್ನ ಭಕ್ತಿಗಾಗಿ ಮಾತ್ರ ನನ್ನನ್ನು ಗುರುತಿಸಬೇಕು ಎಂಬುದು ನನ್ನ ಇಚ್ಛೆ ಎಂದು ಮಾನಸಿ ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೊನಾಲಿಸಾ ಅವರ ಮದುವೆಯ ಬಗ್ಗೆಯೂ ಮಾತನಾಡಿದ ಮಾನಸಿ, ವಿವಾದಾತ್ಮಕ ಹೇಳಿಕೆ ನೀಡಿದರು. ಮೊನಾಲಿಸಾ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಾರೆ ಮತ್ತು ನಾನದನ್ನು ವಿರೋಧಿಸುತ್ತೇನೆ ಎಂದಿರುವ ಮಾನಸಿ, ನಾನು ನನ್ನ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮೊನಾಲಿಸಾ ಅವರೊಂದಿಗಿನ ಹೋಲಿಕೆಗಳಿಂದ ಆರಂಭದಲ್ಲಿ ಜನಪ್ರಿಯತೆ ಗಳಿಸಿದ್ದರೂ, ಈಗ ಆ ಎಲ್ಲದರಿಂದ ದೂರ ಉಳಿಯಲು ಮಾನಸಿ ಬಯಸುತ್ತಿದ್ದಾರೆ. ಶಿವನ ಭಕ್ತಿ ಮತ್ತು ಕನ್ವರ್ ಯಾತ್ರೆಯ ಮೂಲಕವೇ ತನ್ನದೇ ಆದ ಪ್ರತ್ಯೇಕ ಗುರುತನ್ನು ಸೃಷ್ಟಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ತನ್ನ ಹೆಸರಿನೊಂದಿಗೆ ಬೇರೆಯವರನ್ನು ತಳಕುಹಾಕದೆ, ಕನ್ವರ್ ಯಾತ್ರೆಯ ವೈರಲ್ 'ಶೆರ್ನಿ' ಎಂದೇ ತನ್ನನ್ನು ಕರೆಯಬೇಕೆಂದು ಮಾನಸಿ ಮನವಿ ಮಾಡಿದ್ದಾರೆ. ಬೃಹತ್ ಕನ್ವರ್ ಹೊತ್ತುಕೊಂಡು 180 ಕಿಲೋಮೀಟರ್ ದೂರ ಕ್ರಮಿಸಿದ ತಮ್ಮ ಧಾರ್ಮಿಕ ಯಾತ್ರೆಯೇ ತಮಗೆ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net