ಸರ್​ ನೀವು ಮಮ್ಮೂಟ್ಟಿ ತಾನೇ? ತಮಿಳುನಾಡಿನಲ್ಲಿ ದಾರಿತಪ್ಪಿದ ಸೂಪರ್‌ಸ್ಟಾರ್​ಗೆ ದಾರಿ ತೋರಿದ ಯುವಕ! Mammootty

ಸರ್​ ನೀವು ಮಮ್ಮೂಟ್ಟಿ ತಾನೇ? ತಮಿಳುನಾಡಿನಲ್ಲಿ ದಾರಿತಪ್ಪಿದ ಸೂಪರ್‌ಸ್ಟಾರ್​ಗೆ ದಾರಿ ತೋರಿದ ಯುವಕ! Mammootty
ಸರ್​ ನೀವು ಮಮ್ಮೂಟ್ಟಿ ತಾನೇ? ತಮಿಳುನಾಡಿನಲ್ಲಿ ದಾರಿತಪ್ಪಿದ ಸೂಪರ್‌ಸ್ಟಾರ್​ಗೆ ದಾರಿ ತೋರಿದ ಯುವಕ! Mammootty
Published on

ಪ್ರಮುಖ ಮುಖ್ಯಾಂಶಗಳು

  • ಮಮ್ಮೂಟ್ಟಿಗೆ ದಾರಿ ತೋರಿಸಿದ ತಮಿಳುನಾಡಿನ ಅಭಿಮಾನಿ ಪಾಂಡಿಯನ್
  • ಗೂಗಲ್ ಮ್ಯಾಪ್​ಗೂ ಸಿಗದ ರಸ್ತೆಯಲ್ಲಿ ಬೈಕ್​ನಲ್ಲಿ​ ಮಾರ್ಗದರ್ಶನ
  • ನಸುಕಿನ ಜಾವದಲ್ಲಿ ಕೇರಳಕ್ಕೆ ತೆರಳುತ್ತಿದ್ದ ನಟನಿಗೆ ಅನಿರೀಕ್ಷಿತ ಸಹಾಯ
  • ಸೆಲ್ಫಿ ತೆಗೆದುಕೊಂಡು ಪ್ರೀತಿಯ ಕಾಣಿಕೆ ನೀಡಿದ ಮೇರು ನಟ ಮಮ್ಮೂಟ್ಟಿ
Mammootty : ರಾಜ್ಯ-ಭಾಷೆಗಳ ಗಡಿಗಳನ್ನು ಮೀರಿ ಸಿನಿಮಾ ತಾರೆಯರ ಮೇಲಿರುವ ಅಭಿಮಾನ ಎಂಥೆಂಥ ಅನಿರೀಕ್ಷಿತ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮಲಯಾಳಂ ಚಲನಚಿತ್ರ ರಂಗದ ಮೇರು ನಟ ಮಮ್ಮೂಟ್ಟಿ ಅವರಿಗೆ ಇತ್ತೀಚೆಗೆ ತಮಿಳುನಾಡಿನಲ್ಲಿ ಅಭಿಮಾನಿಯೊಬ್ಬನಿಂದ ಅನಿರೀಕ್ಷಿತ ಹಾಗೂ ಅಪರೂಪದ ಪ್ರೀತಿಯ ಕಾಣಿಕೆ ಲಭಿಸಿದೆ.
ಕಾರೈಕುಡಿಯಲ್ಲಿ ಮಮ್ಮೂಟ್ಟಿ ಕಂಪನಿಯ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ನಿತೀಶ್ ಸಹದೇವ್ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣ ಮುಗಿಸಿ, ನಟ ಹಾಗೂ ರಾಜಕಾರಣಿ ರಮೇಶ್ ಪಿಶಾರಡಿ ಮತ್ತು ಇತರರೊಂದಿಗೆ ಮಮ್ಮೂಟ್ಟಿ ಕೇರಳಕ್ಕೆ ಮರಳುತ್ತಿದ್ದರು. ರಾತ್ರಿ ಸುಮಾರು 3.30ರ ಸುಮಾರಿಗೆ ತಿರುಪತ್ತೂರು ಬಳಿ ಹೆದ್ದಾರಿ ಬಂದ್ ಆಗಿದ್ದರಿಂದ ಅವರ ತಂಡ ದಾರಿ ಸಿಗದೆ ಸಂಕಷ್ಟಕ್ಕೆ ಸಿಲುಕಿತು.
ಗೂಗಲ್ ಮ್ಯಾಪ್‌ನಲ್ಲಿದ್ದ ವಿವಿಧ ಮಾರ್ಗಗಳನ್ನು ಪ್ರಯತ್ನಿಸಿದರೂ ಯಾವುದೇ ದಾರಿ ಸಿಗದೆ, ಸುಮಾರು ಒಂದು ಗಂಟೆಯ ಬಳಿಕ ವಾಪಸ್ ಕಾರೈಕುಡಿಗೆ ಮರಳಲು ನಿರ್ಧರಿಸಿದರು. ಪಟ್ಟಮಂಗಲಂ ಬಳಿ ಪೆಟ್ರೋಲ್ ಬಂಕ್‌ನಲ್ಲಿ ನಿಂತು ದಾರಿ ಕೇಳುತ್ತಿದ್ದಾಗ, ಅಲ್ಲೇ ಮಲಗಿದ್ದ ಯುವಕನೊಬ್ಬ ಎದ್ದು ಬಂದು "ನೀವು ಮಲಯಾಳಿಗರಾ?" ಎಂದು ಪ್ರಶ್ನಿಸಿದ.
ಆ ಯುವಕ ಕಾರಿನೊಳಗೆ ಇಣುಕಿ ನೋಡಿ ಮಮ್ಮೂಟ್ಟಿಯನ್ನು ಗುರುತಿಸಿ, ಆಶ್ಚರ್ಯ ಹಾಗೂ ಉತ್ಸಾಹದಿಂದ "ನೀವು ಮಮ್ಮೂಟ್ಟಿ ಸರ್ ಅಲ್ಲವೇ? ನನ್ನ ಹಿಂದೆ ಬನ್ನಿ" ಎಂದನು. ಗೂಗಲ್ ಮ್ಯಾಪ್‌ಗೂ ಸಿಗದ ರಸ್ತೆಗಳ ಮೂಲಕ ಬೈಕ್ ಚಲಾಯಿಸಿಕೊಂಡು ಸುಮಾರು 10 ಕಿಲೋಮೀಟರ್ ದೂರದವರೆಗೆ ನಟನ ಕಾರಿಗೆ ದಾರಿ ತೋರಿಸಿ, ನೇರವಾಗಿ ಹೋಗಿ, ಕೇರಳ ಇಲ್ಲೇ ಮುಂದಿದೆ ಎಂದು ಬೀಳ್ಕೊಟ್ಟನು.
ಈ ಅಪರೂಪದ ಭೇಟಿಯ ನಂತರ ನಟ ಮಮ್ಮೂಟ್ಟಿ ಕಾರಿನಿಂದಿಳಿದು ಆ ಯುವಕನ ಫೋನ್ ಪಡೆದು ಪಿಶಾರಡಿಯವರಿಂದ ಫೋಟೋ ಕ್ಲಿಕ್ಕಿಸಿಕೊಂಡರು. ಆ ಯುವಕ ತನ್ನ ಹೆಸರು 'ಪಾಂಡಿಯನ್' ಎಂದು ತಿಳಿಸಿದಾಗ, ಪಿಶಾರಡಿ "ಪಾಂಡಿಯನ್, ಪ್ಯಾನ್ ಇಂಡಿಯನ್" ಎಂದು ಹಾಸ್ಯಭರಿತವಾಗಿ ನುಡಿದು, ಆ ನಸುಕಿನ ಜಾವದ ಭೇಟಿಯನ್ನು ಒಂದು ಮಧುರ ಹಾಗೂ ಮರೆಯಲಾಗದ ಕ್ಷಣವನ್ನಾಗಿ ಬದಲಾಯಿಸಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net