ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಯಿಗೆ ಊಟ ಹಾಕುವ ವಿಚಾರಕ್ಕೆ ಗಲಾಟೆಯಾಗೋದು, ಸಾಕು ಹಸುಗಳು ರಸ್ತೆ ಮಧ್ಯೆ ಬಂದು ನಿಂತಾಗ ಮಾಲೀಕರನ್ನು ಬೈದಾಡೋದು, ಮನೆ ಮುಂದೆ ಕಸ ಸುರಿದರೆ, ಹೂ ಕಿತ್ತರೆ ಜಗಳ ಮಾಡೋದು ನೋಡಿದ್ದೇವೆ. ಆದ್ರೆ ಜೈಭೀಮನಗರದಲ್ಲಿ ಬೆಕ್ಕು ಮರಿ ಹಾಕಿದ್ದಕ್ಕಾಗಿ, ಬೆಕ್ಕಿನ ಮರಿಗಳ(Bengaluru Cat Dispute) ತಂದೆ ಯಾರು ಎನ್ನುವ ವಿಚಾರಕ್ಕೆ ನೆರೆಹೊರೆಯವರು ಕಿತ್ತಾಡಿಕೊಂಡ ವಿಚಿತ್ರ ಘಟನೆ ಸದ್ಯ ಶೇಷಾದ್ರಿಪುರಂ ಪೊಲೀಸ್ ಠಾಣೆ ಮೆಟ್ಟಿಲೇರಿದೆ.