ಇತ್ತೀಚೆಗೆ ಪೊಲೀಸ್ ಕಾನ್ಸ್ಸ್ಟೇಬಲ್ ಅವರ ಹತ್ಯೆಯ ನಂತರ ಪಾಕಿಸ್ತಾನವು ಭಾರತದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದನ್ನು ಮುಂದುವರಿಸಿದೆ ಎಂದು ಆರ್ಎಸ್ಎಸ್ ನಾಯಕ ಆರೋಪಿಸಿದರು. "ಪಾಕಿಸ್ತಾನ ಇಂತಹ ಪಿತೂರಿಗಳನ್ನು ಮುಂದುವರಿಸಿದೆ. ಪಾಕಿಸ್ತಾನ ಶಾಂತಿಯಿಂದ ಇರಲು ಬಯಸುವುದಿಲ್ಲ, ಇತರರನ್ನೂ ಶಾಂತಿಯಿಂದ ಇರಲು ಬಿಡುವುದಿಲ್ಲ. ಅದು ದಿನನಿತ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ" ಎಂದರು. ಅಲ್ಲದೆ, ಪಾಕಿಸ್ತಾನವು ಪಶ್ತೂನ್ಗಳು, ಅಹ್ಮದಿಯಾಗಳು ಮತ್ತು ಕಾಶ್ಮೀರಿಗಳು ಸೇರಿದಂತೆ ತನ್ನದೇ ಜನರನ್ನು ಹತೋಟಿಯಲ್ಲಿಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುವ ಬದಲು ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದರು.