ಕೇತನ್ ಅಗರ್ವಾಲ್ ಹತ್ಯೆ ಕೇಸ್!...ಸಂಪ್ರದಾಯಬದ್ಧ ಜೀವನ ನಡೆಸುವ ಮೂಲಕ ಜೈಲಿನಿಂದ ದೂರವಿರಿ ಎಂದ ಸಂಸದೆ ಕಂಗನಾ ರಣಾವತ್ | Kangana Ranaut

Kangana Ranaut | ಸಂಪ್ರದಾಯಬದ್ಧ ಜೀವನ ನಡೆಸುವ ಮೂಲಕ ಜೈಲಿನಿಂದ ದೂರವಿರಿ ಎಂದ ಸಂಸದೆ ಕಂಗನಾ ರಣಾವತ್
Kangana Ranaut | ಸಂಪ್ರದಾಯಬದ್ಧ ಜೀವನ ನಡೆಸುವ ಮೂಲಕ ಜೈಲಿನಿಂದ ದೂರವಿರಿ ಎಂದ ಸಂಸದೆ ಕಂಗನಾ ರಣಾವತ್
Published on
ಪುಣೆ: ಕೇತನ್ ಅಗರ್ವಾಲ್ ಜೊತೆಗೆ ನಿಶ್ಚಿತಾರ್ಥವಾಗಿದ್ದರೂ ಸಿಯಾ ಗೋಯಲ್, ಚೇತನ್ ಚೌಧರಿಯನ್ನು ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ವರದಿಗಳ ಕುರಿತು ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರು ಅವರು, ಯುವಜನತೆಗೆ ಸಂಪ್ರದಾಯಬದ್ಧ ಜೀವನ ನಡೆಸುವ ಮೂಲಕ ತಮ್ಮ ಶಕ್ತಿಯನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಪುಣೆ ಕೊಲೆ ಪ್ರಕರಣದ ಇತ್ತೀಚಿನ ಬೆಳವಣಿಗೆಗಳ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಡೇಟಿಂಗ್ ಆಪ್‌ಗಳು, ಬೆಂಚಿಂಗ್, ಘೋಸ್ಟಿಂಗ್, ಡಬಲ್/ಟ್ರಿಪಲ್ ಡಿಜಿಟ್ ಬಾಡಿ ಕೌಂಟ್ಸ್, ಕ್ರಂಬಿಂಗ್, ಸೀಯಿಂಗ್, ಟೆಸ್ಟಿಂಗ್, ಫಿಲ್ಟರ್ಸ್, ಸ್ಟೋರೀಸ್, ಡ್ರಗ್ಸ್, ಕ್ಲಬ್‌ಗಳು. ಇವೆಲ್ಲವೂ ಹಾಗೂ ಇದಕ್ಕಿಂತ ಹೆಚ್ಚಿನವು ಇದ್ದರೂ ಸಹ ಇನ್ನೂ ಸಾಲುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರಿ ಅಥವಾ ಉದ್ದೇಶವಿಲ್ಲದ ಪ್ರೇರಣೆಯು ಇಂತಹ ಅನೇಕ ಸ್ವಯಂ-ವಿನಾಶಕಾರಿ ರೂಪಗಳನ್ನು ಕಂಡುಕೊಳ್ಳುತ್ತದೆ, ಅದಕ್ಕಾಗಿಯೇ ಯಾವುದಾದರೂ ವಿಷಯದ ಬಗ್ಗೆ ತೀವ್ರ ಆಸಕ್ತಿ ಅಥವಾ ಶ್ರದ್ಧೆ ಇರುವುದು ಮುಖ್ಯ, ಆದರೆ ಅದು ನಿಮ್ಮ ವೃತ್ತಿಜೀವನ ಅಥವಾ ಯಾವುದಾದರೂ ಕೌಶಲ್ಯದ ಮೇಲಿರಬೇಕು ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದೆ , ಯುವಕರು ಮತ್ತು ಚಂಚಲ ಮನಸ್ಸಿನವರಿಗೆ ನಾನು ಹೇಳಲು ಬಯಸುವುದೇನೆಂದರೆ, ನಿಮ್ಮ ಶಕ್ತಿಯನ್ನು ರಚನಾತ್ಮಕ ಹಾದಿಯಲ್ಲಿ ಬಳಸಿಕೊಳ್ಳಿ. ಮುಕ್ತ ಮನಸ್ಸಿನಿಂದ ಆಲೋಚಿಸಿ ಆದರೆ ಸಂಪ್ರದಾಯಬದ್ಧ ಜೀವನವನ್ನು ನಡೆಸಿ. ಆ ಮೂಲಕ ನೀವು ಜೈಲು, ಬೇಸರ, ನಕಾರಾತ್ಮಕತೆ, ಖಿನ್ನತೆ ಮತ್ತು ಅಂತಹ ಅನೇಕ ವಿನಾಶಕಾರಿ ಸನ್ನಿವೇಶಗಳಿಂದ ದೂರವಿರಬಹುದು ಎಂದು ಬರೆದುಕೊಂಡಿದ್ದಾರೆ.

ಪುಣೆ ಕೊಲೆ ಪ್ರಕರಣd ಹಿನ್ನೆಲೆ

ಪುಣೆ ಮೂಲದ ಉದ್ಯಮಿ ಕೇತನ್ ಅಗರ್ವಾಲ್ ಹಾಗೂ ಸಿಯಾ ಗೋಯಲ್ ಅವರ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿತ್ತು. ನವೆಂಬರ್‌ನಲ್ಲಿ ನಡೆಯಬೇಕಿದ್ದ ಇವರ ಮದುವೆಗಾಗಿ ಎರಡೂ ಕುಟುಂಬದವರು ಉದಯಪುರದಲ್ಲಿ ಹೋಟೆಲ್ ಸಹ ಬುಕ್ ಮಾಡಿದ್ದರು ಎನ್ನಲಾಗಿದೆ. ಆದರೆ, ಜೂನ್ 18 ರಂದು ಕೇತನ್ ಅವರನ್ನು ಲೋಹಗಡ್ ಕೋಟೆಯ ಪ್ರಪಾತದಿಂದ ನೂಕಿ ಹತ್ಯೆ ಮಾಡಲಾಗಿದೆ. ಈ ಕೊಲೆಗೆ ಸಂಚು ರೂಪಿಸಿದ ಕೆಲವೇ ದಿನಗಳಲ್ಲಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net