ಅಚ್ಚರಿಯ ವಿಚಾರವೆಂದರೆ, ಈ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಖರೀದಿಸಿದ ನಂತರ, ಅವುಗಳನ್ನು ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಬಾಡಿಗೆಗೆ ನೀಡಲಾಗಿತ್ತು. ಅವುಗಳ ಬಳಕೆಗಾಗಿ ಪಕ್ಷದ ಖಾತೆಯಿಂದ ಮತ್ತೆ ಭಾರಿ ಮೊತ್ತದ ಹಣವನ್ನು ಕಂಪನಿಗೆ ರವಾನಿಸಲಾಗುತ್ತಿತ್ತು. ಇದು ಅನುಮಾನಾಸ್ಪದ ನಡೆಯಾಗಿದ್ದು, ನೈಜ ವಹಿವಾಟು ಮತ್ತು ಅದರ ನಿಜವಾದ ಫಲಾನುಭವಿಗಳನ್ನು ಮರೆಮಾಚಲು ಹೀಗೆ ಯೋಜಿಸಲಾಗಿರಬಹುದು ಎಂದು ಇಡಿ ಅಭಿಪ್ರಾಯಪಟ್ಟಿದೆ.