ಫಲಿತಾಂಶದ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಜಾರ್ಖಂಡ್ ಕಾಂಗ್ರೆಸ್ ನಾಯಕ ರಾಜೇಶ್ ಠಾಕೂರ್, ತಮಗೆ ಕನಿಷ್ಠ 26 ಮತಗಳು ಬೀಳುವ ನಿರೀಕ್ಷೆಯಿತ್ತು ಆದರೆ ಬಂದಿದ್ದು ಕೇವಲ 21 ಮತಗಳು ಮಾತ್ರ ಎಂದು ಹೇಳಿದ್ದಾರೆ. ನಮ್ಮ ಮೈತ್ರಿಕೂಟದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ನ 16, ಜೆಎಂಎಂನ 4, ಆರ್ಜೆಡಿಯ 4 ಮತ್ತು ಸಿಪಿಐ(ಎಂಎಲ್)ನ 2 ಮತಗಳು ನಮಗೆ ಸಿಗಬೇಕಿತ್ತು. ಆದರೆ ನಮಗೆ ಆರ್ಜೆಡಿ ಮತ್ತು ಎಡಪಕ್ಷಗಳ ಮತಗಳು ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ನಂಬಿದ ಜಾಗದಲ್ಲೇ ನಮಗೆ ದೊಡ್ಡ ವಿಶ್ವಾಸದ್ರೋಹವಾಗಿದೆ. ಈ ಬಗ್ಗೆ ಮೈತ್ರಿಕೂಟದ ಪ್ರತಿಯೊಬ್ಬರೂ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಠಾಕೂರ್ ಆಕ್ರೋಶ ಹೊರಹಾಕಿದ್ದಾರೆ.