ಉರಿ ಬಿಸಿಲುನಿಂದ ತಲೆಸುತ್ತು, ವಾಕರಿಕೆ, ಅತಿಯಾಗಿ ಬೆವರು ಅಥವಾ ಸ್ನಾಯು ಸೆಳೆತದಂತಹ ಸಮಸ್ಯೆಗಳು ಜನರಿಗೆ ಕಾಡುತ್ತಿವೆ. ವಿಪರೀತ ಶಾಖದಿಂದ ಹಗಲಿನ ವೇಳೆ ಓಡಾಡುವುದನ್ನು ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಹಗುರ ಅಥವಾ ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು. ಹೊರಗಡೆ ಓಡಾಡುವ ವೇಳೆ ಛತ್ರಿ, ಟೋಪಿ ಅಥವಾ ಕನ್ನಡಕ ಬಳಸಬೇಕು. ದೇಹ ತಂಪಾಗಿಸಲು ಎಳನೀರು, ಮಜ್ಜಿಗೆ, ನಿಂಬೆ ಪಾನೀಯ ಅಥವಾ ಓಆರ್ಎಸ್ ಸೇವಿಸಬೇಕು. ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ಸೊಪ್ಪು ಸೇರಿ ಇತರ ತರಕಾರಿ ಹೆಚ್ಚಾಗಿ ಸೇವಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರು ಕುಡಿಯಬೇಕು.ಕಾಫಿ, ಟೀ, ಮದ್ಯಪಾನ ಮತ್ತು ಹೆಚ್ಚು ಸಕ್ಕರೆ ಅಂಶವಿರುವ ತಂಪುಪಾನೀಯಗಳಿಂದ ದೂರವಿರಬೇಕು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಅತಿಯಾದ ದೈಹಿಕ ಶ್ರಮದ ಕೆಲಸ ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.