ಸೌದಿ ಅರೇಬಿಯಾ ಕೇವಲ ಮಿತ್ರ ರಾಷ್ಟ್ರವಲ್ಲ, ಅದು ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟದ ಸಮಯದಲ್ಲಿ ಹಣಕಾಸಿನ ನೆರವು, ತೈಲ ಮತ್ತು ಹೂಡಿಕೆ ನೀಡುವ ಪ್ರಮುಖ ಮೂಲವಾಗಿದೆ. ಕಳೆದ ವರ್ಷವಷ್ಟೇ ಉಭಯ ದೇಶಗಳ ನಡುವೆ ಪರಸ್ಪರ ರಕ್ಷಣಾ ಒಪ್ಪಂದ ಸಹಿಯಾಗಿದೆ. ಅಂದರೆ, ಸೌದಿಯ ಮೇಲೆ ದಾಳಿಯಾದರೆ ಪಾಕಿಸ್ತಾನಿ ಸೇನೆ ಸೌದಿಯ ಪರವಾಗಿ ಯುದ್ಧಕ್ಕೆ ನಿಲ್ಲಬೇಕಾಗುತ್ತದೆ. ಇತ್ತೀಚೆಗೆ ದುಬೈ ಏರ್‌ಪೋರ್ಟ್ ಮತ್ತು ಸೌದಿಯ ಕಟ್ಟಡಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿರುವುದು ಪಾಕಿಸ್ತಾನದ ಈ ಭರವಸೆಯನ್ನು ಪರೀಕ್ಷೆಗೆ ಒಡ್ಡಿದೆ.