ಖಲಿಸ್ತಾನಿ ಉಗ್ರ ಪನ್ನುನ್ ಹತ್ಯೆಗೆ ಸಂಚು ಆರೋಪ; ಅಮೆರಿಕಾದ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ ಭಾರತೀಯ ಪ್ರಜೆ | US court

ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್
Published on
ವಾಷಿಂಗ್ಟನ್​: ಅಮೆರಿಕಾದಲ್ಲಿ ಸಿಖ್ ಪ್ರತ್ಯೇಕವಾದಿ ಮತ್ತು ಖಲಿಸ್ತಾನಿ ಉಗ್ರ ಸಂಘಟನೆ ಪ್ರಮುಖ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಗುರಿಯಾಗಿಸಿ ಹತ್ಯೆ ಸಂಚು ಆರೋಪ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬುವರು ಶುಕ್ರವಾರ(ಫೆ. 13) ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯದಲ್ಲಿ(US court) ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ನ್ಯೂಯಾರ್ಕ್​ ಟೈಮ್ಸ್ ಪ್ರಕಾರ, ಅಮೆರಿಕದ ಫೆಡರಲ್ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಭಾರತದಿಂದ ಉಗ್ರ ಎಂದು ಕರೆಸಿಕೊಂಡಿರುವ, ಪನ್ನುನ್ ಹತ್ಯೆ ಮಾಡಲು ಮತ್ತು ಸಂಚು ರೂಪಿಸಿದ ಮೂರು ಆರೋಪಗಳಲ್ಲಿ ಅಮೆರಿಕಾ ಪೊಲೀಸರಿಂದ ಬಂಧಿತರಾಗಿರುವ ಭಾರತೀಯ ನಿಖಿಲ್ ಗುಪ್ತಾ ನ್ಯಾಯಾಲದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದೆ.
ನ್ಯೂಯಾರ್ಕ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅಮೆರಿಕ ಸರ್ಕಾರದ ಕೋರಿಕೆಯ ಮೇರೆಗೆ ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾರನ್ನು ಬಂಧಿಸಲಾಗಿತ್ತು. ಉಗ್ರ ಪನ್ನುನ್ ಅಮೇರಿಕನ್ ಮತ್ತು ಕೆನಡಾ ಎರಡೂ ದೇಶಗಳ ಪೌರತ್ವವನ್ನು ಹೊಂದಿದ್ದಾರೆ.
ಬಂಧಿತ ನಿಖಿಲ್ ಗುಪ್ತಾ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರ ಆಜ್ಞೆಯ ಮೇರೆಗೆ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ವಾದಿಸಿದ್ದಾರೆ. ಆದರೆ ಈ ಆರೋಪಗಳನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಯಾವುದರಲ್ಲೂ ಭಾಗಿಯಾಗಿಲ್ಲ, ಈ ವಿಷಯವನ್ನು ಸೂಕ್ತ ಕಾನೂನು ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net