India vs South Africa | ಪ್ರಸಿದ್ಧ್, ಕುಲದೀಪ್ ದಾಳಿಗೆ ನಲುಗಿದ ಹರಿಣಗಳು; ಭಾರತಕ್ಕೆ 271 ಗುರಿ

India vs South Africa | ಭಾರತದ ಬೌಲರ್​ಗಳಾದ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ವಿಕೆಟ್​ ಕಿತ್ತಿ ಸಂಭ್ರಮಿಸಿದ ಕ್ಷಣ
India vs South Africa | ಭಾರತದ ಬೌಲರ್​ಗಳಾದ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ವಿಕೆಟ್​ ಕಿತ್ತಿ ಸಂಭ್ರಮಿಸಿದ ಕ್ಷಣ
Published on
ವಿಶಾಖಪಟ್ಟಣ: ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ(India vs South Africa) ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಹರಿಣಗಳು 270 ರನ್‌ಗಳಿಗೆ ಅಲೌಟ್​ ಆಗಿದೆ. ಅಲ್ಲದೆ, ಇದರೊಂದಿಗೆ ಟೀಂ ಇಂಡಿಯಾಕ್ಕೆ 271 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ.
ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಲು ಬಂದ ಹರಿಣಗಳ ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ನಂತರ ಜತೆಯಾದ ನಾಯಕ ಟೆಂಬಾ ಬವುಮ ಮತ್ತು ಆಫ್ರಿಕಾ ಸ್ಟಾರ್​ ಓಪನರ್​ ಕ್ವಿಂಟನ್ ಡಿ ಕಾಕ್ ಸೇರಿ 113 ರನ್​ಗಳ ಉತ್ತಮ ಜತೆಯಾಟವಾಡಿದರು. ನಾಯಕ 48 ರನ್​ಗಳಿಸಿ ರವೀಂದ್ರ ಜಡೇಜಾಗೆ ತಮ್ಮ ವಿಕೆಟ್​ ಒಪ್ಪಿಸಿದರು.
ಹರಿಣಗಳ ಪರ ಏಕಾಂಗಿ ಹೋರಾಟ ನಡೆಸಿದ ಡಿ ಕಾಕ್(106,89 ಬಾಲ್​) ಅದ್ಬುತ ಶತಕ ಸಿಡಿಸಿ ಸಂಭ್ರಮಿಸಿದರು. ನಂತರ ಬಂದ ಮ್ಯಾಥ್ಯೂ ಬ್ರೀಟ್ಜ್ಕೆ(24 ರನ್​) ಮತ್ತು ಐಡೆನ್ ಮಾರ್ಕ್ರಾಮ್(01) ರನ್​ಗಳಿಸಿ ಬಹುಬೇಗ ಪೆವಿಲಿಯನ್​ ಸೇರಿದರು. ನಂತರ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದ ಡೆವಾಲ್ಡ್ ಬ್ರೆವಿಸ್ (29ರನ್​) ಹಾಗೂ ಮಾರ್ಕೊ ಜಾನ್ಸೆನ್ (17ರನ್​) ಗಳಿಸಿ ನಿರಾಸೆ ಪ್ರದರ್ಶನ ನೀಡಿದರು.
ಭಾರತ ಪರವಾಗಿ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್​ ಕಿತ್ತು ಹರಿಣಗಳ ಸರ್ವಪತನಕ್ಕೆ ಕಾರಣರಾದರು. ಈ ಸರಣಿಯನ್ನು ಗೆಲ್ಲಲು ಭಾರತಕ್ಕೆ 271 ರನ್​ಗಳ ಅವಶ್ಯಕತೆ ಇದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net