ಯುವ ಮಿತ್ರರೇ, ಬಾಹ್ಯಾಕಾಶ ಕ್ಷೇತ್ರವು ಇಂದು ಕೇವಲ ಕನಸಲ್ಲ, ಅದೊಂದು ಅದ್ಭುತ ವೃತ್ತಿಜೀವನವಾಗಿದೆ. ಕೇವಲ ಪೈಲಟ್ ಆಗುವುದು ಮಾತ್ರವಲ್ಲ, ವಿಜ್ಞಾನಿಗಳು, ಎಂಜಿನಿಯರ್‌ಗಳು, ವೈದ್ಯರು ಮತ್ತು ಡೇಟಾ ಅನಲಿಸ್ಟ್‌ಗಳಿಗೂ ಅಲ್ಲಿ ಕೆಲಸವಿದೆ. ನೀವು ಧೈರ್ಯದಿಂದ ಮುನ್ನುಗ್ಗಿ. ಅನ್ವೇಷಣೆಯನ್ನು ನಿಲ್ಲಿಸಬೇಡಿ. ನಿಮ್ಮಲ್ಲಿರುವ ಕುತೂಹಲವೇ ನಿಮ್ಮನ್ನು ನಕ್ಷತ್ರಗಳತ್ತ ಕರೆದೊಯ್ಯುತ್ತದೆ. ಸೋಲಿಗೆ ಹೆದರಬೇಡಿ, ಪ್ರತಿ ಸೋಲು ಒಂದು ಹೊಸ ಪಾಠ ಕಲಿಸುತ್ತದೆ ಎಂದು ಯುವಕರಿಗೆ ವಿಲಿಯಮ್ಸ್ ಸಂದೇಶ ನೀಡಿದ್ದಾರೆ.