ಎಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂ ಅನಾವರಣ: ವಿಮಾನಗಳ ಕಲಾಕೃತಿಯ ಕಣ್ತುಂಬಿಕೊಳ್ಳುವ ಅವಕಾಶ-HAL

,ಏರೋಸ್ಪೇಸ್ ವಸ್ತುಸಂಗ್ರಹಾಲಯ
,ಏರೋಸ್ಪೇಸ್ ವಸ್ತುಸಂಗ್ರಹಾಲಯ
Published on
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ(ಎಚ್‌ಎಎಲ್), ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ಅನ್ನು ಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನಿಲ್ ಶನಿವಾರ ಅನಾವರಣಗೊಳಿಸಿದರು.
ನಗರದ ಮಾರತ್ತಹಳ್ಳಿಯ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಈ ಹೆರಿಟೇಜ್ ಸೆಂಟರ್,ಏರೋಸ್ಪೇಸ್ ವಸ್ತುಸಂಗ್ರಹಾಲಯವನ್ನು ಆಧುನೀಕರಣಗೊಳಿಸಲಾಗಿದ್ದು, ಏ.13ರಿಂದ ಸಾರ್ವಜನಿಕರಿಗೆ ಮತ್ತೆ ತೆರೆಯಲಿದೆ. ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ವರೆಗೆ ತೆರೆಯಲಿದ್ದು, ವಸ್ತುಸಂಗ್ರಹಾಲಯವು ಅಂಗಡಿ ಮತ್ತು ಕೆಫೆಟೇರಿಯಾ ಹೊಂದಿದೆ.
2001ರಲ್ಲಿ ಸ್ಥಾಪನೆಯಾದ ಎಚ್‌ಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ದೇಶದ ಮೊದಲ ಏರೋಸ್ಪೇಸ್ ಮ್ಯೂಸಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ವಸ್ತುಸಂಗ್ರಹಾಲಯದಲ್ಲಿ ವಿಮಾನದ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವು ನಾವೀನ್ಯತೆ, ಇಂಜಿನಿಯರಿಂಗ್ ಶ್ರೇಷ್ಠತೆ ಮತ್ತು ರಾಷ್ಟ್ರೀಯ ಸೇವೆಯ ಉತ್ಸಾಹಕ್ಕೆ ಹೊಸ ಅನುಭವ ನೀಡಲಿದೆ ಎಂದು ಡಾ.ಡಿ.ಕೆ.ಸುನಿಲ್ ಹೇಳುತ್ತಾರೆ. ಎಚ್‌ಎಎಲ್‌ನ ನಿರ್ದೇಶಕ ಡಾ.ಬರೇಣ್ಯ ಸೇನಾಪತಿ, (ಹಣಕಾಸು), ನಿರ್ದೇಶಕರಾದ ಕೆ.ರವಿ (ಕಾರ್ಯಾಚರಣೆ), ಎಂ.ಜಿ. ಬಾಲಸುಬ್ರಹ್ಮಣ್ಯ, (ಇಂಜಿನಿಯರಿಂಗ್ ) ಮತ್ತು ಅಜಯ್ ಕುಮಾರ್ ಶ್ರೀವಾಸ್ತವ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಸ್ತುಸಂಗ್ರಹಾಲಯವು ಹಿಂದೂಸ್ತಾನ್ ಟರ್ಬೊ ಫ್ಯಾನ್ ಇಂಜಿನ್ ಪ್ರತಿಕೃತಿ ಮತ್ತು ಎಚ್‌ಎಲ್‌ನ ಐಕಾನಿಕ್ ವಿಮಾನವಾದ ಪ್ರಚಂದ್, ತೇಜಸ್ ಒಳಗೊಂಡ 3ಡಿ ಅನಾಮಾರ್ಫಿಕ್ ರನ್‌ವೇ ಸೇರಿ ಇತರ ಅತ್ಯಾಧುನಿಕ ಸ್ಥಾಪನೆಯನ್ನು ಪ್ರದರ್ಶಿಸಲಿದೆ. ಚಲನ ಸ್ಥಾಪನೆ ಮತ್ತು ಹೊಲೊಗ್ರಾಮ್ ಫ್ಯಾನ್ ಪ್ರದರ್ಶನ ಇರಲಿದೆ.
ವಿಂಗ್ ವಿಮಾನಗಳು, ರೋಟರಿ-ವಿಂಗ್ ಪ್ಲಾಟ್‌ಫಾರ್ಮ್‌ಗಳು, ನಾಗರಿಕ ವಿಮಾನಯಾನ, ಇಂಜಿನ್‌ಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಒಳಗೊಂಡ ಎಚ್‌ಎಲ್‌ನ ಪ್ರಮುಖ ಉತ್ಪನ್ನಗಳ ವಿವರವಾದ 3ಡಿ ಮಾದರಿ ಒಳಗೊಂಡಿದೆ. ಯುವ ಜನಾಂಗವನ್ನು ಪ್ರೇರೇಪಿಸಲು ವಿವಿಧ ಕ್ರೀಡೆಗಳು, ಹಾರುವ ಯಂತ್ರ ತಯಾರಕರು, ರಸಪ್ರಶ್ನೆ, ಕಲೆ ಮತ್ತು ಬಣ್ಣ ಕೇಂದ್ರಗಳಿವೆ.ಜನರಿಗೆ ಬಾಹ್ಯಾಕಾಶ ನೌಕೆ ಮಾಡ್ಯೂಲ್ ಬಾಹ್ಯಾಕಾಶ ಪರಿಶೋಧನೆಯ ನೋಟದ ಅನುಭವ ನೀಡಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net