ಮುಂದುವರಿದು ಮಾತನಾಡಿದ ಅವರು, ಸದಾಶಿವನಗರದಲ್ಲಿ ಆರ್ಎಸ್ಎಸ್ನವರಿಗೂ ಹಾಗೂ ಇನ್ಯಾರಿಗೋ ಜಾಗ ಕೊಟ್ಟಿದ್ದಾರೆ. ಯಾವ ಯಾವ ಕಾಲದಲ್ಲಿ, ಯಾರ ಯಾರ ಆಡಳಿತದಲ್ಲಿ ಇಂತಹ ಜಾಗಗಳನ್ನು ಯಾರಿಗೆಲ್ಲಾ ನೀಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದೊಡ್ಡ ಪಟ್ಟಿಯೇ ಇದೆ, ಅದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.