ನಿಯಮ ಪ್ರಕಾರ ಭೂವರ್ಗಾವಣೆ ಮಾಡುವಂತಿಲ್ಲ. ಆದರೂ, ವಿಜಯಶೇಖರ್ ತಂಗಯ್ಯ ಎಂಬುವರು ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿಕೊಂಡು ನಕಲಿ ದಾಖಲೆ, ಸಹಿಯನ್ನು ಪೋರ್ಜರಿ ಮಾಡುವ ಮೂಲಕ ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಸಿಲುಕಿರುವ ಕೆಲ ಮೂವರು ನೌಕರರು, ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆದಿದ್ದಾರೆ.ಆರೋಪಟ್ಟಿ ಪ್ರಮಾಣಪತ್ರಕ್ಕೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸಹಿ ಹಾಕಿದ್ದಾರೆ.