ಕಳೆದ ವರ್ಷ ಅಂದರೆ, 2025ರ ಬಜೆಟ್ ಮಂಡನೆ ವೇಳೆ ಬಿಹಾರ ರಾಜ್ಯದ ಮೇಲೆ ವಿಶೇಷ ಗಮನ ಹರಿಸಲಾಗಿತ್ತು. ಅದೇ ರೀತಿ, ಈ ಬಾರಿ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಹಾಗೂ ಕೇರಳ ಮೇಲೆ ಕೇಂದ್ರಿಕರಿಸಲಾಗಿದೆ. ಮುಂಬರುವ ಏಪ್ರಿಲ್ ತಿಂಗಳಲ್ಲಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಜವಳಿ, ರಸ್ತೆ ಮತ್ತು ರೈಲು ಸೌಕರ್ಯ ಮತ್ತು ರೇರ್ ಅರ್ಥ್ ಮೈನಿಂಗ್ ಕ್ಷೇತ್ರಗಳಲ್ಲಿ ಈ ರಾಜ್ಯಗಳಿಗೆ ಬಂಪರ್ ಘೋಷಣೆ ಮಾಡಲಾಗಿದೆ. ಇದಿಷ್ಟೇ ಅಲ್ಲದೆ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗಳನ್ನು ಮುಂದಿಟ್ಟುಕೊಂಡು ವಿಶೇಷ ಕೊಡುಗೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಘೋಷಣೆ ಮಾಡಿದ್ದಾರೆ. ಹಾಗಾದರೆ, ಯಾವ ರಾಜ್ಯಗಳಿಗೆ ಏನೆಲ್ಲ ಕೊಡುಗೆಗಳು ಸಿಕ್ಕಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.