ತಿರುವನಂತಪುರಂ ಪಾಲಿಕೆ ಮೇಯರ್ ಆಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ವಿ. ರಾಜೇಶ್ ಆಯ್ಕೆ | V.V. Rajesh
ಕೊಡುಂಗನೂರು ಕೌನ್ಸಿಲರ್ ವಿ.ವಿ. ರಾಜೇಶ್
Published on:
Copied
Follow Us
ತಿರುವನಂತಪುರಂ: ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ ಇತಿಹಾಸ ಸೃಷ್ಟಿಸಿರುವ ಬಿಜೆಪಿ, ಮೇಯರ್ ಆಗಿ ರಾಜ್ಯ ಕಾರ್ಯದರ್ಶಿ ಮತ್ತು ಕೊಡುಂಗನೂರು ಕೌನ್ಸಿಲರ್ ವಿ.ವಿ. ರಾಜೇಶ್(V.V.Rajesh) ಅವರು ಆಯ್ಕೆಯಾಗಿದ್ದಾರೆ.
ತಿರುವನಂತಪುರಂ ಕಾರ್ಪೊರೇಷನ್ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಮೇಯರ್ ಒಬ್ಬರು ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಗುರುವಾರ ಬಿಜೆಪಿ ವಿ.ವಿ.ರಾಜೇಶ್ ಅವರನ್ನು ಮೇಯರ್ ಸ್ಥಾನಕ್ಕೆ ಘೋಷಣೆ ಮಾಡಿತ್ತು. ಬಿಜೆಪಿಯ 50 ಕೌನ್ಸಿಲರ್ಗಳು ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿಯ ಬೆಂಬಲ ಅವರಿಗೆ ಇದೆ.
ಇನ್ನೂ ಯುಡಿಎಫ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ 17 ಮತಗಳನ್ನು ಪಡೆದರೆ, ಎಲ್‌ಡಿಎಫ್ ಮೇಯರ್ ಅಭ್ಯರ್ಥಿ ಆರ್‌ಪಿ ಶಿವಾಜಿ 29 ಮತಗಳು ಬಿದ್ದಿವೆ. ಕರುಮಂ ವಾರ್ಡ್ ಕೌನ್ಸಿಲರ್ ಜಿ.ಎಸ್. ಆಶಾ ನಾಥ್ ಅವರನ್ನು ಉಪ ಮೇಯರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಡಿ. 9 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆದ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅತಿಹೆಚ್ಚು ಸೀಟು ಪಡೆದ ಗೆಲುವು ಸಾಧಿಸಿದೆ. ತಿರುವನಂತಪುರಂ ಪಾಲಿಕೆಯಲ್ಲಿ ಮಾತ್ರ ಬಿಜೆಪಿ ಗೆಲುವನ್ನು ಬೀರಿದೆ (ಏಜೆನ್ಸೀಸ್).