ಪೋಕ್ಸೋ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ 2023ರ ನ.16ರಂದು ಮುರುಘಾ ಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದರು. ಬಳಿಕ 2024, ಏಪ್ರಿಲ್ 23ರಂದು ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಜಾಮೀನು ರದ್ದಾಗಿ ಮತ್ತೆ ಬಂಧನವಾದರು. ಕೇವಲ 3 ತಿಂಗಳಲ್ಲಿ ಸಾಕ್ಷಿ ವಿಚಾರಣೆ ನಡೆಸಿ ಎಂದು ಗಡುವು ನೀಡಿ, ಜಾಮೀನು ರದ್ದು ಮಾಡಲಾಯಿತು. ಬಳಿಕ 2024, ಅಕ್ಟೋಬರ್ 7ರಂದು ಚಿತ್ರದುರ್ಗ ನ್ಯಾಯಾಲಯ ಪೋಕ್ಸೋ ಕೇಸ್‌ನಲ್ಲಿ ಸಾಕ್ಷ್ಯಗಳ ಸಂಗ್ರಹಣೆ ಪೂರ್ಣಗೊಂಡ ನಂತರ ಮತ್ತೆ ಜಾಮೀನು ನೀಡಲಾಯಿತು. 2025, ಜುಲೈ 3ರಂದು ಚಿತ್ರದುರ್ಗ ನ್ಯಾಯಾಲಯದಲ್ಲಿ ತಮ್ಮ 313 ಹೇಳಿಕೆಯನ್ನು ನೀಡಿ, ಜಿಲ್ಲೆಯನ್ನು ಬಿಟ್ಟು ದಾವಣಗೆರೆಗೆ ಹೊರಟರು.