ನಿರ್ಮಲಾ ಸೀತಾರಾಮನ್ ಡೀಪ್​ಪೇಕ್​ ವೀಡಿಯೋ ನೋಡಿ 33 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ |Nirmala Sitaraman

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನಿರ್ಮಲಾ ಸೀತಾರಾಮನ್ ಆನ್​ಲೈನ್​ ಟ್ರೇಡಿಂಗ್​ ವೇದಿಕೆಯೊಂದನ್ನು ಬಳಸಲು ಪ್ರೋತ್ಸಾಹಿಸುತ್ತಿರುವ ಡೀಪ್​ಪೇಕ್​ ವೀಡಿಯೊ
  • ಡೀಪ್‌ಫೇಕ್ ವೀಡಿಯೊದಿಂದ ಆಕರ್ಷಿತಳಾಗಿ 33 ಲಕ್ಷ ಕಳೆದುಕೊಂಡ ಮಹಿಳೆ
ಬೆಂಗಳೂರು : ಬೆಂಗಳೂರಿನ ಸಿ.ವಿ. ರಾಮನ್ ನಗರದ 54 ವರ್ಷದ ಮಹಿಳೆಯೊಬ್ಬಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitaraman) ಅವರು ಆನ್​ಲೈನ್​ ಟ್ರೇಡಿಂಗ್​ ವೇದಿಕೆಯೊಂದನ್ನು ಬಳಸಲು ಪ್ರೋತ್ಸಾಹಿಸುತ್ತಿರುವ ಡೀಪ್​ಪೇಕ್​ ವೀಡಿಯೊವನ್ನು ವೀಕ್ಷಿಸಿ, ಹೂಡಿಕೆ ಮಾಡಿದ ಪರಿಣಾಮ 33 ಲಕ್ಷ ರೂ.ಗಳಿಗೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾಳೆ.
ಡೀಪ್‌ಫೇಕ್ ವೀಡಿಯೊದಿಂದ ಆಕರ್ಷಿತರಾದ ಮಹಿಳೆ ಟ್ರೇಡಿಂಗ್ ಖಾತೆಗೆ ಸೈನ್ ಅಪ್ ಮಾಡಿ, ತನ್ನ ಬ್ಯಾಂಕಿಂಗ್ ಮತ್ತು ಕೆವೈಸಿ ವಿವರಗಳನ್ನು ನೀಡಿ, ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುವವರೆಗೂ ಹಣವನ್ನು ಕಳುಹಿಸುತ್ತಲೇ ಇದ್ದರು.
ನೋಂದಣಿಯಾದ ತಕ್ಷಣ, ವಾಟ್ಸಾಪ್ ಗುಂಪಿಗೆ ತನ್ನನ್ನು ಸೇರಿಸಿ, ವ್ಯಾಪಾರ ಆರಂಭಿಸಲು 21,000 ರೂ.ಗಳನ್ನು ವರ್ಗಾಯಿಸಲು ಹೇಳಲಾಗಿದೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ನಂತರ ನಾಕಾ ಸೊಲ್ಯೂಷನ್ ಲಿಮಿಟೆಡ್‌ನ ಹಿರಿಯ ಹಣಕಾಸು ಸಲಹೆಗಾರ್ತಿ ವರ್ಣಿಕಾ ರೆಡ್ಡಿ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯಿಂದ ಕರೆಗಳು ಬರಲು ಪ್ರಾರಂಭಿಸಿದವು ಮತ್ತು ಅವರು $88,000 ಲಾಭ ಗಳಿಸಿದ್ದಾರೆ ಎಂದು ಹೇಳಿಕೊಂಡರು.
ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ, ಮಹಿಳೆ ಒಂಬತ್ತು ವಹಿವಾಟುಗಳಲ್ಲಿ ಒಟ್ಟು 33,25,413 ರೂ.ಗಳನ್ನು ಹಲವಾರು ಬ್ಯಾಂಕುಗಳಿಂದ ಆರು ವಿಭಿನ್ನ ವ್ಯಾಪಾರಿಗಳಿಗೆ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ. ತಾನು ಹೂಡಿಕೆ ಮಾಡುತ್ತಿದ್ದ ವೇದಿಕೆ ನಕಲಿ ಎಂದು, ತಾನು ಮೋಸ ಹೋಗಿದ್ದೇನೆಂದು ತಿಳಿದ ತರುವಾಯ ಯುವತಿ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಪೋಲಿಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು BNS ಸೆಕ್ಷನ್ 318 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net