ನಟಿ ರುಕ್ಮಿಣಿ ವಸಂತ್ ಬಿಕಿನಿ ಪೊಟೋ ವೈರಲ್ ಕೇಸ್​; AI ವಿಡಿಯೋ ಹರಿಬಿಟ್ಟವರ ವಿರುದ್ಧ FIR ದಾಖಲು..Rukmini Vasanth

Rukmini Vasanth bikini photo viral case FIR
Rukmini Vasanth bikini photo viral case FIR
Published on

ಪ್ರಮುಖ ಮುಖ್ಯಾಂಶಗಳು

  • ನಟಿ ರುಕ್ಮಿಣಿ ವಸಂತ ಬಿಕಿನಿ AI ವಿಡಿಯೋ ಹರಿಬಿಟ್ಟವರ ವಿರುದ್ಧ FIR ದಾಖಲು
  • ನಟಿ ರುಕ್ಮಿಣಿ ಕೊಟ್ಟ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ FIR
  • 29 ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳ ಮೇಲೆ ದೂರು
ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್​ವುಡ್​ ನಟಿ ರುಕ್ಮಿಣಿ ವಸಂತ್​ ಅವರ ಡೀಪ್​ ಫೇಕ್​  ಬಿಕಿನಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಆ ವಿರುದ್ಧ ನಟಿ ರುಕ್ಮಿಣಿ ವಸಂತ್(Rukmini Vasanth) ಕೊಟ್ಟ ದೂರಿನ ಮೇರೆಗೆ ಸೈಬರ್ ಕ್ರೈ  ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.  ಸದ್ಯ ಪೊಲೀಸರ ಈ ಕ್ರಮವು  ಆರೋಪಿಗಳಿಗೆ ನಡುಕ ಹುಟ್ಟಿಸಿದಂತಾಗಿದೆ. 
ಎಐ ಹಾಗೂ ಡೀಪ್​ ಫೇಕ್​ ಬಳಕೆ ಮಾಡಿಕೊಂಡು ಬೇರೊಬ್ಬರ ವಿಡಿಯೋಗೆ ರುಕ್ಮಿಣಿ ವಸಂತ್​ ಅವರ ಮುಖವನ್ನು ಜೋಡಿಸಿ, ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಇದರಿಂದ ನನಗೆ ತೀವ್ರ ಮುಜುಗರ ಉಂಟಾಗಿದೆ. ನನ್ನ ಚಾರಿತ್ರ್ಯಹರಣ ಮಾಡಲಾಗಿದೆ ಎಂದು ಬೆಂಗಳೂರು ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದೆ ಎನ್ನಲಾಗಿದೆ. 

ಎಷ್ಟು ಸೋಶಿಯಲ್​ ಮೀಡಿಯಾ ಅಕೌಂಟ್​ ವಿರುದ್ಧ ಕ್ರಮ?

ನಟಿ ರುಕ್ಮಿಣಿ ವಸಂತ್​ ಅವರು  ಕೊಟ್ಟ ದೂರಿನ ಮೇರೆಗೆ ಪೊಲೀಸರು ಸದ್ಯ 29 ಸೋಶಿಯಲ್​ ಮೀಡಿಯಾದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. 9 ಇನ್​ಸ್ಟಾಗ್ರಾಂ ಅಕೌಂಟ್ ಆದರೆ, ಇನ್ನು 14 ಟ್ಟೀಟರ್ ಅಕೌಂಟ್ ಹಾಗೂ 6 ಫೇಸ್ ಬುಕ್ ಅಕೌಂಟ್ ಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಐಟಿ ಆಕ್ಟ್​ 66C ,66 D ಬಿಎನ್​ಎಸ್​,75(3), 79, 336, ,356, 351, 352 294 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು,  ವಿಚಾರಣೆ ಮುಂದುವರೆಸಿದ್ದಾರೆ ಎನ್ನಲಾಗಿದೆ

 ವಿಡಿಯೋದಲ್ಲಿ ಏನಿತ್ತು?

ಕಾಂತಾರ-2, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಟಿ ರುಕ್ಮಿಣಿ ವಸಂತ್​ ಅವರು  ಸ್ವಿಮ್ಮಿಂಗ್​ ಪೂಲ್​ಗೆ ಇಳಿಯುವಂತೆ, ಬಿಕಿನಿಯಲ್ಲಿ  ಅಲ್ಲಿಂದ  ಹೊರಬರುವಂತೆ ಎಐ ವಿಡಿಯೋ ಕ್ರಿಯೇಟ್​ ಮಾಡಿ ಹಂಚಿಕೊಳ್ಳಲಾಗಿತ್ತು. ಇದು ನನಗೆ ತೀರಾ ಮಜುಗುರಕ್ಕೆ ಒಳಗಾಗುವಂತೆ ಮಾಡಿದೆ ಎಂದು ಪೋಸ್ಟ್​ ಹಂಚಿಕೊಂಡಿದ್ದರು. ಜೊತೆಗೆ ಪೊಲೀಸರಿಗೆ ದೂರು ನೀಡಿದ್ದರು. 

ನಟಿಯರಿಗೆ ತಪ್ಪದ ಡೀಪ್​ಫೇಕ್​ ಕಾಟ

ಈ ಮೊದಲು ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ಬಳಕೆ ಮಾಡಿಕೊಂಡು ಡೀಪ್​ಫೇಕ್​​ ವಿಡಿಯೋ ಕ್ರಿಯೇಟ್​ ಮಾಡಲಾಗಿತ್ತು. ಅದು ರಾತ್ರೋರಾತ್ರಿ ವೈರಲ್​ ಆಗಿತ್ತು. ಆಸಂಬಂಧ ಅವರು ನೀಡಿದ್ದ ದೂರಿನ ಮೇರೆಗೆ ದೆಹಲುಇ ಪೊಲೀಸರು ಆಂಧ್ರ ಪ್ರದೇಶದ ಗುಂಟೂರು ಮೂಲದ ನವೂನ್​ ಈಮಾನಿ ಎಂಬಾತನನ್ನು ಬಂಧಿಸಿದ್ದರು. ಕತ್ರಿನಾ ಕೈಫ್​​, ಕಾಜೋಲ್​ ಹಾಗೂ ನೋರಾ ಫತೇಹಿ, ಶ್ರೀ ಲೀಲಾ ಅವರನ್ನು ಸಹ ಡೀಪ್​ಫೇಕ್​ಗೆ ಬಳಕೆ ಮಾಡಿಕೊಳ್ಳಲಾಗಿತ್ತು,. ನಟಿ ಆಲಿಯಾ ಭಟ್​ ಅವರನ್ನು ತೀರಾ ಕೆಟ್ಟದಾಗಿ ಬಿಂಬಿಸುವ ಡೀಪ್​ಫೇಕ್​ ವಿಡಿಯೋವನ್ನು 2023 ನವೆಂಬರ್​ನಲ್ಲಿ  ಬಿಡುಗಡೆ ಮಾಡಲಾಗಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net