ಕೇವಲ ಮಸೀದಿ, ದರ್ಗಾಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಿ? ತೆರವು ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಿ; ಗೃಹ ಸಚಿವ ಅಮಿತ್ ಶಾಗೆ ಓವೈಸಿ ಮನವಿ! Asaduddin Owaisi on Mosque Demolition
ಕೇವಲ ಮಸೀದಿಗಳನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ: ಅಸಾದುದ್ದೀನ್ ಓವೈಸಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜಸ್ಥಾನದಲ್ಲಿ ಅಕ್ರಮ ಮಸೀದಿ ಮತ್ತು ದರ್ಗಾ ತೆರವು ಕಾರ್ಯಾಚರಣೆ
ಕೇವಲ ಮಸೀದಿಗಳನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ: ಅಸಾದುದ್ದೀನ್ ಓವೈಸಿ
ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಗೃಹ ಸಚಿವ ಅಮಿತ್ ಶಾಗೆ AIMIM ಮುಖ್ಯಸ್ಥ ಮನವಿ
ಟ್ವಿಟರ್: ರಾಜಸ್ಥಾನದಲ್ಲಿ ಮಸೀದಿ, ದರ್ಗಾ ಹಾಗೂ ಮುಸ್ಲಿಮರ ಧಾರ್ಮಿಕ ಕಟ್ಟಡಗಳನ್ನು ನಾಶಪಡಿಸಲಾಗುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕೆಂದು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi on Mosque Demolition) ಕೇಂದ್ರ ಗೃಹ ಸಚಿವ ಅಮಿತ್ ಶಾ ರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಓವೈಸಿ, ರಾಜಸ್ಥಾನದ ಬಿಕಾನೇರ್, ಫಲೋಡಿ, ಜೈಸಲ್ಮೇರ್ ಮತ್ತು ಬಾರ್ಮರ್ ನಲ್ಲಿ ಕೇವಲ ಮುಸ್ಲಿಮರ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನನಗೆ ಮಾಹಿತಿ ದೊರೆತಿರುವ ಪ್ರಕಾರ, ಬಿಕಾನೇರ್ ನಲ್ಲಿ ನಾಲ್ಕು ಹಾಗೂ ಫಲೋಡಿ, ಜೈಸಲ್ಮೇರ್ ಮತ್ತು ಬಾರ್ಮರ್ ನಲ್ಲಿ ತಲಾ ಒಂಭತ್ತು ಮಸೀದಿಗಳನ್ನು ಕೆಡವಲಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರ ಕೇವಲ ಮುಸಲ್ಮಾನರನ್ನು ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅಕ್ರಮ ಭೂಮಿಯಲ್ಲಿ ಈ ಕಟ್ಟಡಗಳನ್ನು ನಿರ್ಮಿಸಿದ ಹಿನ್ನಲೆ ಈ ಕ್ರಮ ತೆಗೆದುಕೊಂಡಿದ್ದೆವೆಂದು ಇಲಾಖೆ ಹೇಳುತ್ತಿದೆ. ಆದರೆ ನೋಟಿಸ್ನ್ನು ಕೇವಲ ಮುಸ್ಲಿಮರಿಗೆ ಮಾತ್ರ ನೀಡಲಾಗಿದೆ, ಇತರ ಧರ್ಮದವರ ಎಲ್ಲಾ ಕಟ್ಟಡಗಳು ಕಾನೂನಾತ್ಮಕವಾಗಿ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಹಾಗೆಯೇ ಕೆಲವು ಮಸೀದಿಗಳ ದಾಖಲೆಗಳು ಸರಿಯಾಗಿ ಇದ್ದರೂ ಸಹ ಧ್ವಂಸ ಮಾಡಲಾಗಿದೆ. ಇದು ನ್ಯಾಯ ಸಮ್ಮತವೇ? ಕೇವಲ ಮಸೀದಿಗಳನ್ನೇ ಏಕೆ ಗುರಿಯಾಗಿಸಿದ್ದಿರಿ ಎಂದು ಕಿಡಿ ಕಾರಿದ್ದಾರೆ.
ತಮ್ಮ ಎಕ್ಸ್ ಪೋಸ್ಟ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಟ್ಯಾಗ್ ಮಾಡಿರುವ ಓವೈಸಿ, ಕೇವಲ ನಮ್ಮ ಮಸೀದಿ ಮತ್ತು ದರ್ಗಾಗಳನ್ನು ಗುರಿಯಾಗಿಸಿ ನಡೆಸುತ್ತಿರುವ ಈ ಕಾರ್ಯಾಚರಣೆಯನ್ನು ನೀವು ನಿಲ್ಲಿಸಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೆನೆ ಎಂದು ಓವೈಸಿ ಬರೆದುಕೊಂಡಿದ್ದಾರೆ, (ಏಜನ್ಸೀಸ್).