ಕಾಪಿ ಮಾಡಿ NEET ಪಾಸಾಗಲು ವಿಫಲ ಯತ್ನ: ಶೌಚಾಲಯದಲ್ಲಿ ಮೊಬೈಲ್​ ಅಡಗಿಸಿಟ್ಟ ಕಿಲಾಡಿ ಕಿಡ್​​; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಾವಿ ಡಾಕ್ಟರ್​​! NEET Cheating in Hyderabad

ಕಾಪಿ ಹೊಡೆಯಲು ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಹೈದರಾಬಾದ್ ವಿದ್ಯಾರ್ಥಿ!
ಕಾಪಿ ಹೊಡೆಯಲು ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಹೈದರಾಬಾದ್ ವಿದ್ಯಾರ್ಥಿ!
Published on

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್‌ನ ನೀಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ
  • ಪದೇ ಪದೇ ಟಾಯ್ಲೆಟ್‌ಗೆ ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಕಿಲಾಡಿ ಕಿಡ್​
  • ಕಾಪಿ ಹೊಡೆಯಲು ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಹೈದರಾಬಾದ್ ವಿದ್ಯಾರ್ಥಿ!
ಹೈದರಾಬಾದ್​: ನಿನ್ನೆ (ಭಾನುವಾರ, ಜೂನ್​.21) ದೇಶದೆಲ್ಲಡೆ ನೀಟ್​ ಯುಜಿ ಪರೀಕ್ಷೆಯ ಮರು ಪರೀಕ್ಷೆ ನಡೆಸಲಾಗಿದ್ದು, ಈ ಭಾರಿ ಪರೀಕ್ಷೆ ಬಹಳ ಕಟ್ಟುನಿಟ್ಟಾಗಿ ನಡೆದಿದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ ಹೈದರಾಬಾದ್​​ನಲ್ಲಿ 18 ವರ್ಷದ ಹುಡುಗನೊಬ್ಬ ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಮೊಬೈಲ್​ ಪೋನ್​ ಅಡಗಿಸಿಟ್ಟು, ನಂತರ ಪೊಲೀಸರಲ್ಲಿ ತಗಲಾಕೊಂಡಿರುವ (NEET Cheating in Hyderabad) ಘಟನೆ ವರದಿಯಾಗಿದೆ.

ಶೌಚಾಲಯದಲ್ಲಿ ಮೊಬೈಲ್​!

ಈ ಕೃತ್ಯವೆಸಗಿರುವ ವಿದ್ಯಾರ್ಥಿ ಹೈದರಾಬಾದಿನ ಅಚ್ಚಂಪೇಟ್​​ ನಿವಾಸಿ ಎಂದು ತಿಳಿದುಬಂದಿದೆ. ಈ ಘಟನೆಯು ಜಿಲ್ಲಾ ಪರಿಷತ್ ಪ್ರೌಢಶಾಲೆ (ZPHS) ರಾಗಣ್ಣಗುಡ ಎಂಬಲ್ಲಿ ನಡೆದಿದೆ.
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಕಠಿಣ ತಪಾಸಣೆಗೆ ಒಳಪಡಿಸಿ ನಂತರ ಒಳ ಬಿಡುತ್ತಾರೆಂದು ತಿಳಿದ ಹುಡುಗ, ಬೆಳಿಗ್ಗೆ 7 ಗಂಟೆ ಹೊತ್ತಿಗೆ ಶಾಲೆಯ ಕಂಪೌಂಡ್​ನ್ನು ಜಿಗಿದು ವೆಂಟಿಲೇಟರ್​ ಮೂಲಕ ಶೌಚಾಲಯವನ್ನು ತಲುಪಿದ್ದಾನೆ.
ನಂತರ ಮೊಬೈಲ್​ನ್ನು ಅವಿತಿಟ್ಟು, ಪರೀಕ್ಷೆಗೆಯಲ್ಲಿ ಗೊಂದಲ ಬಂದಾಗ ಇಲ್ಲಿಗೆ ಬಂದು ಉತ್ತರ ಹುಡಿಕಿಕೊಂಡು ಹೋಗುವುದು ಇತನ ಫ್ಲಾನ್​ ಆಗಿತ್ತು. ಆದರೆ ಈ ವಿದ್ಯಾರ್ಥಿ ನಿರಂತರವಾಗಿ ಶೌಚಾಲಯಕ್ಕೆ ಹೋಗುವುದನ್ನು ಗಮನಿಸಿದ ಪೊಲೀಸರು ಶೌಚಾಲಯಕ್ಕೆ ದಿಢೀರ್​ ಎಂಟ್ರಿ ಕೊಟ್ಟಾಗ ಈ ಹುಡುಗ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು!

ವಿದ್ಯಾರ್ಥಿಯನ್ನು ಸೆರೆ ಹಿಡಿದ ನಂತರ ಅವನ ಮೊಬೈಲನ್ನು ವಶ ಪಡಿಸಿಕೊಂಡು, ಯಾವುದಾದರೂ ಚಿಟಿಂಗ್​ ಅಪ್ಲಿಕೇಶನ್​ ಬಳಿಸಿದ್ದಾನೆಯೇ? ಅಥವಾ ಯಾರಾದರೂ ಇವನಿಗೆ ಉತ್ತರಗಳನ್ನು ಮೊದಲೇ ನೀಡಿದ್ದರೆ? ಎಂದೆಲ್ಲಾ ತನಿಖೆ ಮಾಡಿದ್ದಾರೆ.
ಅದರೆ ಈ ಹುಡುಗ ಗೂಗಲ್​ನಲ್ಲಿ ಉತ್ತರಗಳನ್ನು ಹುಡುಕಲು ಪ್ರಯತ್ನಿಸಿದ್ದಾನೆಂದು ತಿಳಿದುಬಂದಿದೆ. ಸದ್ಯ ಈ ವಿದ್ಯಾರ್ಥಿ ಮೇಲೆ ಪರೀಕ್ಷಾ ಅಕ್ರಮ ಕಾಯ್ದೆ ಹಾಗೂ ವಂಚನೆಯ ಆರೋಪದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net