ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಉಖ್ರುಲ್​ನಲ್ಲಿ ಕುಕಿ-ನಾಗಾ ಸಮುದಾಯಗಳ ನಡುವೆ ಘರ್ಷಣೆ; ಮೂವರು ಸಾವು, ಹಲವರಿಗೆ ಗಾಯ | Manipur

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಇಂಫಾಲ್​: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ(ಏ. 24) ಕುಕಿ ಮತ್ತು ನಾಗಾ ಸಮುದಾಯಗಳ ನಡುವೆ ಘರ್ಷಣೆ ನಡೆದು, ಕುಕಿ ಸಮುದಾಯದ ಇಬ್ಬರು ಮತ್ತು ನಾಗಾ ಸಮುದಾಯದ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶಸ್ತ್ರಸಜ್ಜಿತ ತಂಗ್ಖುಲ್ ನಾಗಾ ಪುರುಷರು ಮುಲ್ಲಮ್ ಮತ್ತು ಶೋಂಗ್‌ಫಾಲ್ ಕುಕಿ ಗ್ರಾಮಗಳ ಮೇಲೆ ಬೆಳಗಿನ ಜಾವ ನಡೆಸಿದ ದಾಳಿ ನಡೆಸಿದ್ದಾರೆ ಎಂದು ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಹೇಳಿದ್ದು, ಇಬ್ಬರು ಸ್ವಯಂಸೇವಕರು ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ. ಎರಡು ಮನೆಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಹೇಳಿದೆ.
ದಾಳಿಯನ್ನು ಖಂಡಿಸಿರುವ ಕುಕಿ ಸಂಘಟನೆ, ಪರವಾನಗಿ ಪಡೆದ ಬೇಟೆಯಾಡುವ ಶಸ್ತ್ರಾಸ್ತ್ರಗಳೊಂದಿಗೆ ಆತ್ಮರಕ್ಷಣೆಯ ಕಾನೂನುಬದ್ಧ ಹಕ್ಕನ್ನು ಚಲಾಯಿಸಿದ ಗ್ರಾಮಸ್ಥರು, ಧೈರ್ಯದಿಂದ ದಾಳಿಯನ್ನು ಹಿಮ್ಮೆಟ್ಟಿಸಿದರು. ಮತ್ತು ಈ ಪ್ರಕ್ರಿಯೆಯಲ್ಲಿ ಸಶಸ್ತ್ರ ದಾಳಿಕೋರರಲ್ಲಿ ಒಬ್ಬನನ್ನು ಹೊಡೆದುರುಳಿಸಿದರು ಎಂದು ತಿಳಿಸಿದೆ.
ಇನ್ನೂ ತಂಗ್ಖುಲ್ ನಾಗಾ ಸ್ವಯಂಸೇವಕರು ಮುಲ್ಲಮ್ ಗ್ರಾಮದ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪಗಳನ್ನು ನಾಗಾ ವಿಲೇಜ್ ಗಾರ್ಡ್, ಸೆಂಟ್ರಲ್ ಕಮಾಂಡ್ ತಿರಸ್ಕರಿಸಿದೆ. ಸಿನಾಕೈಥೈ ಗ್ರಾಮದ ಮೇಲೆ ಪದೇ-ಪದೇ ದಾಳಿಗಳು ಮತ್ತು ಕಾರ್ಯಾಚರಣೆ ಅಮಾನತು (SoO) ಒಪ್ಪಂದದ ಅಡಿಯಲ್ಲಿ ಕುಕಿ ಸಶಸ್ತ್ರ ಪಡೆಗಳ ಚಲನವಲನಗಳ ವರದಿಗಳ ನಂತರ ತನ್ನ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾರೆ.
ಸಿರಾಖೋಂಗ್ ಮತ್ತು ಸಿನಾಕೈಥೈ ನಡುವೆ ಗಸ್ತು ತಿರುಗುತ್ತಿದ್ದಾಗ SoO ಅಡಿಯಲ್ಲಿ ಕುಕಿ ಬಂಡುಕೋರರು ನಾಗಾ ವಿಲೇಜ್ ಗಾರ್ಡ್‌ಗಳ ಮೇಲೆ ಹೊಂಚು ಹಾಕಿ ದಾಳಿ ನಡೆಸಿದರು. ದಾಳಿಯಲ್ಲಿ 29 ವರ್ಷದ ನಾಗಾ ಗ್ರಾಮದ ಸ್ವಯಂಸೇವಕನನ್ನು ಕೊಂದರು. ಮತ್ತು ಇತರ ನಾಲ್ವರು ಗಾಯಗೊಂಡರು. ಆ ಬಳಿಕ ಪ್ರತಿದಾಳಿ ನಡೆಯಿತು ಎಂದು ಅದು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಉಖ್ರುಲ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಎರಡೂ ಸಮುದಾಯಗಳ ಶಸ್ತ್ರಸಜ್ಜಿತ ವ್ಯಕ್ತಿಗಳ ನಡುವೆ ಸರಣಿ ಘರ್ಷಣೆಗಳು ನಡೆದಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಮನೆಗಳು ಸುಟ್ಟುಹೋಗಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net