ತಾಜ್​ ಮಹಲ್​ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಜೂನಿಯರ್ ಟ್ರಂಪ್ | Donald Trump Jr

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಜೂನಿಯರ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಜೂನಿಯರ್ ಟ್ರಂಪ್
Published on
ಆಗ್ರಾ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್(Donald Trump Jr.) ಉದಯಪುರದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದು, ಗುರುವಾರ(ನ. 20) ಆಗ್ರಾದಲ್ಲಿರುವ ಐತಿಹಾಸಿಕ ತಾಜ್​ ಮಹಲ್​ಗೆ ಭೇಟಿ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಜೂನಿಯರ್ ಭೇಟಿ ಸಮಯದಲ್ಲಿ ಅವರೊಂದಿಗೆ 40 ದೇಶಗಳ 126 ವಿಶೇಷ ಅತಿಥಿಗಳ ಗುಂಪು ಅವರೊಂದಿಗೆ ಭೇಟಿ ನೀಡಿದೆ. ಈ ಹಿನ್ನೆಲೆ ನಿನ್ನೆ ತಾಜ್​ಮಹಲ್​ನಲ್ಲಿ ಅಧಿಕಾರಿಗಳು ಭದ್ರತೆಯನ್ನು ಬಿಗಿಗೊಳಿಸಿದ್ದು, ಭದ್ರತಾ ಸಿಬ್ಬಂದಿಯಲ್ಲಿ ಎಸಿಪಿ ಮತ್ತು ಎಡಿಸಿ ಶ್ರೇಣಿಯ ಅಧಿಕಾರಿಗಳು ಸೇರಿ ನಗರದ ಪ್ರಮುಖ ಸ್ಥಳಗಳಲ್ಲಿ ಸುಮಾರು 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.
ಇದು ಟ್ರಂಪ್ ಜೂನಿಯರ್ ಅವರ ಭಾರತಕ್ಕೆ ಎರಡನೇ ಭೇಟಿ. 2018ರ ಫೆಬ್ರವರಿ ತಿಂಗಳಲ್ಲಿ ಅವರು ನವದೆಹಲಿ, ಮುಂಬೈ, ಪುಣೆ ಮತ್ತು ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಇಂದು ಸಂಜೆ ಆಗ್ರಾದಿಂದ ಜೂನಿಯರ್ ಟ್ರಂಪ್ ಉದಯಪುರಕ್ಕೆ ತೆರಳಲಿದ್ದಾರೆ.
ಇಂದಿನಿಂದ ನ. 24ರವರೆಗೆ ಅಮೆರಿಕ ಮೂಲದ ಬಿಲಿಯನೇರ್ ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರಾ ಮಂಟೇನಾ ಮತ್ತು ವಂಶಿ ಗಡಿರಾಜು ಅವರ ವಿವಾಹ ಸಮಾರಂಭ ನಡೆಯಲಿದೆ. ಸೋಮವಾರದವರೆಗೆ ದಿ ಲೀಲಾ ಪ್ಯಾಲೇಸ್‌ನಲ್ಲಿ ಉಳಿದುಕೊಂಡು ಮದುವೆ ಸಮಾರಂಭದಲ್ಲಿ ಜೂನಿಯರ್ ಟ್ರಂಪ್​ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತಿಥಿ ಪಟ್ಟಿಯಲ್ಲಿ ಹಾಲಿವುಡ್ ತಾರೆಯರಾದ ಜೆನ್ನಿಫರ್ ಲೋಪೆಜ್ ಮತ್ತು ಜಸ್ಟಿನ್ ಬೀಬರ್ ಸೇರಿದ್ದು, ಅವರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಬಾಲಿವುಡ್‌ನಿಂದ ಹೃತಿಕ್ ರೋಷನ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಮಾಧುರಿ ದೀಕ್ಷಿತ್, ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್, ವಾಣಿ ಕಪೂರ್, ಜಾನ್ವಿ ಕಪೂರ್ ಹಾಗೂ ಕರಣ್ ಜೋಹರ್ ಭಾಗವಹಿಸುವ ಪಟ್ಟಿಯಲ್ಲಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net