ಬಾಹ್ಯಾಕಾಶಕ್ಕೆ ಹೋಗೋದು ಸುಲಭ; ಬೆಂಗಳೂರಿನ ಟ್ರಾಫಿಕ್​ನಲ್ಲಿ ಹೋಗೋದು ಕಷ್ಟ; ಗಗನಯಾತ್ರಿ ಶುಭಾಂಶು ಶುಕ್ಲಾ ಹಾಸ್ಯ | Shubanshu Shukla

ಗಗನಯಾತ್ರಿ ಶುಭಾಂಶು ಶುಕ್ಲಾ
ಗಗನಯಾತ್ರಿ ಶುಭಾಂಶು ಶುಕ್ಲಾ
Published on
ಬೆಂಗಳೂರು: ಭಾರತೀಯ ವಾಯುಪಡೆಯ ಗ್ರೂಪ್​ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ(Shubanshu Shukla) ಅವರು, ಬೆಂಗಳೂರು ಟ್ರಾಫಿಕ್ ಬಗ್ಗೆ ಹಾಸ್ಯ ಮಾಡಿದ್ದು, ನಾನು ಬಾಹ್ಯಾಕಾಶಕ್ಕೆ ಹೋಗೋದು ಸುಲಭವಾಗಿತ್ತು. ಆದರೆ ಬೆಂಗಳೂರಿನ ಟ್ರಾಫಿಕ್​ನಲ್ಲಿ ಪ್ರಯಾಣಿಸೋದು ಕಷ್ಟ ಎಂದು ಹೇಳಿದ್ದಾರೆ.
ಗುರುವಾರ(ನ. 20) ಬೆಂಗಳೂರಿನಲ್ಲಿ ನಡೆದ ಟೆಕ್​ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಇನ್ನೊಂದು ಭಾಗದಲ್ಲಿರುವ ಮಾರತಹಳ್ಳಿಯಿಂದ ಈ ಸಮಾವೇಶ ನಡೆಯುವ ಸ್ಥಳಕ್ಕೆ ತಲುಪಲು ತನ್ನ ನಿಗದಿತ ಭಾಷಣಕ್ಕಿಂತ ಮೂರು ಪಟ್ಟು ಹೆಚ್ಚು ಸಮಯ ತೆಗೆದುಕೊಂಡಿತು ಎಂದು ತಮಾಷೆ ಮಾಡಿದ್ದಾರೆ.
ಇನ್ನೂ ಸಮಾರೋಪ ಸಮಾರಂಭದ ಭಾಷಣದಲ್ಲಿ ಶುಕ್ಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಬೆಂಗಳೂರಿಗೆ ಹೋಗುವುದು ಸುಲಭ, ಆದರೆ ಮಾರತ್ತಹಳ್ಳಿಯಿಂದ ಈ ಸ್ಥಳಕ್ಕೆ ಹೋಗುವುದು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ಇಂತಹ ಸಮಸ್ಯೆ ಮರುಕಳಿಸದಂತೆ ಸರ್ಕಾರ ಖಚಿತ ಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಗ್ರೂಪ್​ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ, 2027ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಮಿಷನ್ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆದ ನಾಲ್ಕು ಗಗನಯಾತ್ರಿಗಳಲ್ಲಿ ಒಬ್ಬರಾಗಿದ್ದಾರೆ.
ಕರ್ನಾಟಕ ಐಟಿ-ಬಿಟಿ ಇಲಾಖೆಯೂ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ಆಯೋಜಿಸಿದ್ದ 'ಫ್ಯೂಚರೈಸ್' ಎಂಬ ವಿಷಯದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ 28ನೇ ಆವೃತ್ತಿಯು ನಿನ್ನೆ ಗುರುವಾರದಂದು ಮುಕ್ತಾಯಗೊಂಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net