ಇಂದಿನಿಂದ ಪ್ರಧಾನಿ ಮೋದಿ ಮೂರು ದಿನಗಳ ಕಾಲ ದಕ್ಷಿಣ ಆಫ್ರಿಕಾ ಪ್ರವಾಸ; ಜಿ 20 ಶೃಂಗಸಭೆಯಲ್ಲಿ ಭಾಗಿ | PM Modi

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ
Published on
ನವದೆಹಲಿ: ಭಾರತ ಮತ್ತು ಜಾಗತಿಕ ದಕ್ಷಿಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಮೊದಲ ಬಾರಿಗೆ ನಡೆಯುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ(PM Modi) ಇಂದು(ನ. 21) ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದಾರೆ.
ನ. 21ರಿಂದ 23ರವರೆಗೆ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಇದು ಆಫ್ರಿಕಾ ಖಂಡದಲ್ಲಿ ನಡೆದ ಮೊದಲ ಜಿ 20 ಶೃಂಗಸಭೆಯಾಗಿದೆ. 2016ರಲ್ಲಿ ದ್ವಿಪಕ್ಷೀಯ ಭೇಟಿ ಮತ್ತು 2018 ಮತ್ತು 2023ರಲ್ಲಿ ನಡೆದ ಎರಡು ಬ್ರಿಕ್ಸ್ ಶೃಂಗಸಭೆಗಳಲ್ಲಿ ಭಾಗವಹಿಸಿದ ಬಳಿಕ ಇಂದು ಪ್ರಧಾನಿ ಮೋದಿ ನಾಲ್ಕನೇ ಬಾರಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡುತ್ತಿದ್ದಾರೆ.
ಇಂಡೋನೇಷ್ಯಾ, ಭಾರತ ಹಾಗೂ ಬ್ರೆಜಿಲ್‌ನ ಅಧ್ಯಕ್ಷತೆಗಳ ಬಳಿಕ, ಗ್ಲೋಬಲ್ ಸೌತ್ ಆಯೋಜಿಸುತ್ತಿರುವ ಸತತ ನಾಲ್ಕನೇ G20 ಶೃಂಗಸಭೆ ಇದಾಗಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ G20 ಸಭೆಯ ಅಧ್ಯಕ್ಷತೆಯನ್ನು ವಹಿಸಿದೆ. 2022ರಲ್ಲಿ ಇಂಡೋನೇಷ್ಯಾ, 2023ರಲ್ಲಿ ಭಾರತ, 2024ರಲ್ಲಿ ಬ್ರೆಜಿಲ್ ಅಧ್ಯಕ್ಷತೆಯನ್ನು ವಹಿಸಿದ್ದವು.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ER) ಸುಧಾಕರ್ ದಲೇಲಾ, G20 ಒಂದು ಪ್ರಮುಖ ವೇದಿಕೆಯಾಗಿದ್ದು, ಹಿಂದಿನ ಅಧಿವೇಶನಗಳಲ್ಲಿ ದೇಶಗಳು ಜಾಗತಿಕ ದಕ್ಷಿಣದ ಮೇಲೆ ಪರಿಣಾಮ ಬೀರುವ ಹಲವಾರು ವಿಷಯಗಳ ಕುರಿತು ಒಮ್ಮತದ ಘೋಷಣೆ ಸೇರಿ ಪೈಲಟ್ ಮತ್ತು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net